SHIVAMOGGA LIVE NEWS | 20 MARCH 2023
SAGARA : ಅನಾರೋಗ್ಯದಿಂದ (ill health) ಬೆಸತ್ತು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆರೆ ಪಕ್ಕದಲ್ಲಿ ಡೆತ್ ನೋಟ್ ಸಿಕ್ಕಿದೆ ಎಂದು ತಿಳಿದು ಬಂದಿದೆ.
ನಿತ್ಯಾನಂದ (58) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಭಾನುವಾರ ರಾತ್ರಿ ಸಾಗರದ ಕೆಳದಿ ಕೆರೆಗೆ ಹಾರಿದ್ದಾರೆ. ಸೋಮವಾರ ಅವರ ಮೃತದೇಹ ಪತ್ತೆಯಾಗಿದೆ. ನಿತ್ಯಾನಂದ ಅವರು ಬೆರಳಚ್ಚುಗಾರರಾಗಿದ್ದರು. ಸಾಗರದ ನ್ಯಾಯಾಲಯದ ಮುಂದೆ ಸುಮಾರು 40 ವರ್ಷದಿಂದ ಬೆರಳಚ್ಚುಗಾರರಾಗಿ ಕೆಲಸ ಮಾಡುತ್ತಿದ್ದರು.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ – ಶಿವಮೊಗ್ಗ – ಸಾಗರ ಹೆದ್ದಾರಿ, ನೀರಗಂಟಿಗೆ ಡಿಕ್ಕಿ ಹೊಡೆದು ಬಸ್ ನಿಲ್ದಾಣಕ್ಕೆ ನುಗ್ಗಿದ ಲಾರಿ