ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ವಾಹನಗಳ ಹರಾಜಿನಲ್ಲಿ (Auction) ಭಾಗವಹಿಸಿ ಅಧಿಕ ಕಮಿಷನ್ ಪಡೆಯಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಲಾಗಿದೆ. ವಾಟ್ಸಪ್ ಗ್ರೂಪ್ ಒಂದಕ್ಕೆ ಸೇರ್ಪಡೆಯಾಗಿದ್ದ ವ್ಯಕ್ತಿಗೆ ಈ ಆಮಿಷವೊಡ್ಡಿ ಹಣ ವರ್ಗಾಯಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ? ವಂಚನೆ ಆಗಿದ್ದೇಗೆ?
ಶಿವಮೊಗ್ಗದ ವ್ಯಕ್ತಿಯೊಬ್ಬರು ವಾಟ್ಸಪ್ ಗ್ರೂಪ್ ಒಂದಕ್ಕೆ ಸೇರ್ಪಡೆಯಾಗಿದ್ದರು. ಅದರಲ್ಲಿ ವಾಹನಗಳ ಹರಾಜು ಕುರಿತು ಮಾಹಿತಿ ಹಂಚಿಕೊಳ್ಳಲಾಗಿತ್ತು. ಹರಾಜಿನಲ್ಲಿ ಭಾಗವಹಿಸಿ ಅಧಿಕ ಕಮಿಷನ್ ಸಂಪಾದಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಶಿವಮೊಗ್ಗದ ವ್ಯಕ್ತಿ ಹರಾಜಿನಲ್ಲಿ ಭಾಗವಹಿಸಿದ್ದರು.

ವಾಟ್ಸಪ್ ಗ್ರೂಪ್‌ನಲ್ಲಿ ತಿಳಿಸಿದಂತೆ ಅವರು ಸೂಚಿಸಿದ ಯು.ಪಿ.ಐ ಐಡಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಏಪ್ರಿಲ್ 5 ರಿಂದ ಮೇ 15ರವರೆಗೆ ಹಂತ ಹಂತವಾಗಿ ಒಟ್ಟು 25.42 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಕೊನೆಗೆ ವಾಹನವನ್ನು ನೀಡಿದೆ, ಕಮಿಷನ್ ಹಣವನ್ನು ನೀಡದೆ ಇದ್ದಾಗ ಶಿವಮೊಗ್ಗದ ವ್ಯಕ್ತಿ ವಿಚಾರಿಸಿದ್ದಾರೆ. ಆಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ.
ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ನೇಣು ಬಿಗಿದ ಸ್ಥಿತಿಯಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೃತದೇಹ ಪತ್ತೆ



