SHIVAMOGGA LIVE NEWS | 21 JANUARY 2023
BHADRAVATHI | ಕ್ಷುಲಕ ವಿಚಾರಕ್ಕೆ ಮಹಿಳೆಯೊಂದಿಗೆ ಜಗಳವಾಡಿ, ಆಕೆಯ ಮೇಲೆ ಗಂಡನೆ ಆ್ಯಸಿಡ್ (acid) ಸುರಿದಿದ್ದಾನೆ. ಗಾಯಗೊಂಡಿರುವ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭದ್ರಾವತಿ ತಾಲೂಕು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ರವಿ ಎಂಬಾತ ತನ್ನ ಪತ್ನಿ ಮೇಲೆ ಆ್ಯಸಿಡ್ (acid) ದಾಳಿ ಮಾಡಿದ್ದಾನೆ. ಸಂತ್ರಸ್ತೆಯ ಮುಖದ ಎಡ ಭಾಗ, ಹೊಟ್ಟೆ, ಬೆನ್ನು ಸೇರಿದಂತೆ ಹಲವು ಕಡೆ ಸುಟ್ಟ ಗಾಯವಾಗಿದೆ.
ಏನಿದು ಪ್ರಕರಣ?
ರವಿ ತನ್ನದೆ ಗ್ರಾಮದ ಯುವತಿಯನ್ನು 12 ವರ್ಷದ ಹಿಂದೆ ಮದುವೆಯಾಗಿದ್ದ. ಕೆಲ ವರ್ಷ ಅನ್ಯೋನ್ಯವಾಗಿದ್ದ ದಂಪತಿಗೆ ಮೂವರು ಮಕ್ಕಳಿದ್ದಾರೆ. ಬಳಿಕ ಸಣ್ಣಪುಟ್ಟ ವಿಚಾರಕ್ಕು ಜಗಳ ಆರಂಭವಾಗಿದ್ದು, ಗಂಡ, ಹೆಂಡತಿ ಪ್ರತ್ಯೇಕವಾಗಿ ವಾಸವಾಗಿದ್ದರು. ರವಿ ತನ್ನ ಮಗನೊಂದಿಗೆ ತುಮಕೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಆತನ ಹೆಂಡತಿ ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು.

ರವಿಯ ಪತ್ನಿ ಸಂಕ್ರಾಂತಿ ಹಬ್ಬದ ಹಿನ್ನೆಲೆ ತನ್ನ ತಾಯಿ ಮನೆಗೆ ಬಂದಿದ್ದಳು. ರವಿ ಕೂಡ ಅಲ್ಲಿಗೆ ಬಂದಿದ್ದ. ಯಾರೂ ಇಲ್ಲದ ವೇಳೆ ಮದ್ಯಪಾನ ಮಾಡಿ ಹೆಂಡತಿ ಮನೆಗೆ ಬಂದ ರವಿ ಆಕೆಯೊಂದಿಗೆ ಜಗಳ ಮಾಡಿದ್ದಾನೆ. ತನ್ನೊಂದಿಗೆ ಬಂದು ಇರು ಎಂದು ಸೂಚಿಸಿದ್ದಾನೆ. ಇದಕ್ಕೆ ಹೆಂಡತಿ ನಿರಾಕರಿಸಿದ್ದಾಳೆ. ಇದೆ ಕಾರಣಕ್ಕೆ, ಕೆಲವು ನಿಮಿಷದ ಬಳಿಕ ಮನೆಯಿಂದ ಹೊರಗೆ ಹೋಗಿ ಕ್ಯಾನ್ ತೆಗೆದುಕೊಂಡು ಬಂದು ಹೆಂಡತಿಯ ಮೇಲೆ ಸುರಿದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಿದ್ದು ಹೊರಳಾಡಿದ ಮಹಿಳೆ
ಕ್ಯಾನಿನಲ್ಲಿದ್ದ ಆ್ಯಸಿಡ್ ಸುರಿದು ರವಿ ಮನೆಯಿಂದ ಹೋಗಿದ್ದಾನೆ. ನೋವು ತಾಳಲಾರದೆ ಮಹಿಳೆ ಮನೆಯಲ್ಲಿ ಬಿದ್ದು ಹೊರಳಾಡಿದ್ದಾಳೆ. ಅಷ್ಟು ಹೊತ್ತಿಗೆ ಮನೆಗೆ ಬಂದ ಮಹಿಳೆಯ ತಾಯಿ, ಆಕೆಯನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿಗೆ ಹೋದಾಗಲೆ ಪತಿ ತನ್ನ ಮೈಮೇಲೆ ಸುರಿದದ್ದು ಆ್ಯಸಿಡ್ ಎಂದು ಆಕೆಗೆ ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ರಾತ್ರಿ ಜಮೀನಿಗೆ ಹೋದವರು ಬೆಳಗ್ಗೆವರೆಗೆ ಮನೆಗೆ ಬರಲಿಲ್ಲ, ಹುಡುಕಿ ಹೋದವರಿಗೆ ಸಿಕ್ಕಿದ್ದು ರೈತನ ಮೃತದೇಹ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200