ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | HOSANAGARA NEWS | 22 ಜನವರಿ 2022
ಮನೆಗೆ ತೆರಳಲು ಬಸ್ಸಿಗೆ ಕಾಯುತ್ತಿದ್ದ ಅಪ್ರಾಪ್ತೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿ, ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಸಂತೋಷ್ (24) ಮತ್ತು ಸುನಿಲ್ (26) ಎಂಬುವವರು ಬಂಧಿತರು. ಇವರು ಹೊಸನಗರ ತಾಲೂಕಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಹೇಗಾಯ್ತು ಘಟನೆ?
ಜನವರಿ 15ರಂದು ಮಧ್ಯಾಹ್ನ ಗ್ರಾಮದಲ್ಲಿರುವ ಮನೆಗೆ ತೆರಳಲು ಅಪ್ರಾಪ್ತೆಯು ಬಸ್ಸಿಗಾಗಿ ಕಾಯುತ್ತಿದ್ದಳು. ಈ ಸಂದರ್ಭ ಕಾರಿನಲ್ಲಿ ಬಂದ ಸಂತೋಷ್ ಮತ್ತು ಸುನಿಲ್, ಅಪ್ರಾಪ್ತೆಯನ್ನು ಮನೆಗೆ ಬಿಡುವುದಾಗಿ ತಿಳಿಸಿದರು. ಆಕೆಯನ್ನು ಪುಸಲಾಯಿಸಿ ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಕರೆದೊಯ್ಯುವ ಬದಲು ಸುನಿಲನ ರೂಮಿಗೆ ಕರೆದೊಯ್ದಿದ್ದಾರೆ.
ಅಪ್ರಾಪ್ತೆಗೆ ಮೊದಲೆ ಪರಿಚಯವಿತ್ತು
ಸಂತೋಷ್ ಮತ್ತು ಸನಿಲ್, ಅಪ್ರಾಪ್ತೆಗೆ ಮೊದಲೆ ಗೊತ್ತಿದ್ದರು. ಇಬ್ಬರೂ ಅಪ್ರಾಪ್ತೆಯ ಮನೆಯಲ್ಲಿ ಜೆಸಿಬಿ ಕೆಲಸಕ್ಕೆ ಬಂದಿದ್ದರು. ಆಗ ಪರಿಚಯವಾಗಿತ್ತು. ಇದೆ ಕಾರಣಕ್ಕೆ ತಮ್ಮ ಗ್ರಾಮದ ಕಡೆಗೆ ತೆರಳುತ್ತಿರುವುದಾಗಿ ತಿಳಿಸಿದಾಗ ಆಕೆ ಕಾರು ಹತ್ತಿದ್ದಾಳೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೂಮಿನಲ್ಲಿ ಅತ್ಯಾಚಾರ, ಚಿತ್ರೀಕರಣ
ಸುನಿಲನ ರೂಮಿಗೆ ಅಪ್ರಾಪ್ತೆಯನ್ನು ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ. ಅಲ್ಲದೆ ಅದನ್ನು ಮೊಬೈಲ್’ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿ ಅಪ್ರಾಪ್ತೆಯನ್ನು ಕಳುಹಿಸಿದ್ದರು. ಪುನಃ ಬಾಲಕಿಯನ್ನು ಕರೆದಾಗ ಆಕೆ ಬರಲು ನಿರಾಕರಿಸಿದ್ದಾಳೆ. ಆಗ ಸಂತೋಷ್ ಮತ್ತು ಸುನಿಲ್, ತಾವು ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ರಾಘವೇಂದ್ರ, ಸಚಿನ್, ಸುಬ್ಬು ಎಂಬುವವರ ಮೊಬೈಲ್’ಗಳಿಗೆ ಕಳುಹಿಸಿದ್ದಾರೆ.
ವಿಚಾರ ತಿಳಿದು ಜನವರಿ 21ರಂದು ಬಾಲಕಿಯು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಸಂತೋಷ್ ಮತ್ತು ಸುನಿಲನನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಪೋಕ್ಸೋ ಕಾಯ್ದೆ, ಐಟಿ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್’ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಹೊಸನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422