ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 05 ಜುಲೈ 2019
ವ್ಯಕ್ತಿಯೊಬ್ಬನ ಹತ್ಯೆ ಮಾಡಿ, ರಸ್ತೆ ಪಕ್ಕದ ಜಮೀನನಲ್ಲಿ ಅರೆಬರೆ ಕಾಣುವ ಹಾಗೆ ಹೂತು ಹಾಕಿದ್ದ ಘಟನೆ ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿ ನಡೆದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೂಳೆಬೈಲು ನಿವಾಸಿ ಆರೀಫ್ ಖಾನ್ (51) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಆರೀಫ್’ನ ಕೊಲೆ ಮಾಡಿ, ಲಕ್ಕಿನಕೊಪ್ಪದ ಜಮೀನು ಒಂದರಲ್ಲಿ ಹೂತು ಹಾಕಿದ್ದಾರೆ. ಲಕ್ಕಿನಕೊಪ್ಪದಿಂದ ಬಿ.ಆರ್.ಪಿಗೆ ತೆರಳುವ ಮಾರ್ಗದಲ್ಲಿ ರಸ್ತೆ ಜಮೀನಿನಲ್ಲಿ ಮೃತದೇಹವನ್ನು ಹೂಳಲಾಗಿತ್ತು.
ಮೃತದೇಹದ ಕೆಲವು ಭಾಗ ಜನರಿಗೆ ಕಾಣಿಸುವಂತಿತ್ತು. ಹಾಗಾಗಿ ಸ್ಥಳೀಯರ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನೆ ಸಂಬಂಧ ಮೃತ ಆರೀಫ್ ಸಹೋದರ ತಬ್ರೇಜ್ ಖಾನ್, ತುಂಗಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]