ಹಳೆ ಶಿವಮೊಗ್ಗ ಭಾಗದಲ್ಲಿ ಕರ್ಫ್ಯೂ, ಗಾಂಧಿ ಬಜಾರ್ ಸೇರಿದಂತೆ ಹಲವು ಕಡೆ ನೈಟ್ ಚೀತಾ ಗಸ್ತು

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 3 DECEMBER 2020

ಬಜರಂಗದಳ ಕಾರ್ಯಕರ್ತನ ಮೇಲಿನ ಹಲ್ಲೆ, ಬಳಿಕ ನಡೆದ ಗಲಭೆ ಹಿನ್ನೆಲೆಯಲ್ಲಿ ಹಳೆ ಶಿವಮೊಗ್ಗ ಭಾಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ನೈಟ್ ಬೀಟ್ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ.

ಹಳೆ ಶಿವಮೊಗ್ಗದಲ್ಲಿ ಕರ್ಫ್ಯೂ

ಪರಿಸ್ಥಿತಿಯನ್ನು ತಿಳಿಗೊಳಿಸುವುದು ಮತ್ತು ರಾತ್ರಿ ವೇಳೆ ಅಹಿತಕರ ಘಟನೆ ತಪ್ಪಿಸುವ ಸಲುವಾಗಿ ಹಳೆ ಶಿವಮೊಗ್ಗ ಭಾಗದಲ್ಲಿ ನೈಟ್‍ ಕರ್ಫ್ಯೂ ಜಾರಿಗೊಳಿಸಲಾಗಿದೆ. ದೊಡ್ಡಪೇಟೆ, ಕೋಟೆ ಮತ್ತು ತುಂಗಾ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಾಗಿದೆ.

ಎಲ್ಲೆಲ್ಲೂ ಬ್ಯಾರಿಕೇಡ್‍ಗಳಿಂದ ಬಂದ್

ಹಳೆ ಶಿವಮೊಗ್ಗ ಭಾಗ ಪ್ರವೇಶಿಸುವ ಎಲ್ಲಾ ಕಡೆಯಲ್ಲೂ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಕರ್ಫ್ಯೂ ಜಾರಿಯಾಗಿರುವುದರಿಂದ ಈ ಭಾಗದಲ್ಲಿ ವಿನಾಕಾರಣ ಮನೆಯಿಂದ ಯಾರೂ ಹೊರ ಬರುವಂತಿಲ್ಲ. ಇನ್ನು, ಹಳೆ ಶಿವಮೊಗ್ಗ ಭಾಗಕ್ಕೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ನಗರದ ವಿವಿಧೆಡೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದು, ನಾಖಾಬಂಧಿ ಹಾಕಲಾಗಿದೆ.

ನೈಟ್ ಬೀಟ್ ಫುಲ್ ಬಿಗಿ

ಗಾಂಧಿ ಬಜಾರ್ ಸೇರಿದಂತೆ ಹಳೆ ಶಿವಮೊಗ್ಗ ಭಾಗದಲ್ಲಿ ನೈಟ್ ಬೀಟ್ ಬಿಗಿಗೊಳಿಸಲಾಗಿದೆ. ಗಣಪತಿ ಹಬ್ಬದ ಸಂದರ್ಭ ಕೈಗೊಳ್ಳಲಾಗುತ್ತಿದ್ದ ಮಾದರಿಯಲ್ಲೇ, ನೈಟ್ ಬೀಟ್ ಚೀತಾ ವ್ಯವಸ್ಥೆ ಮಾಡಲಾಗಿದೆ. ಯಾವುದೆ ಅಹಿತಕರ ಘಟನೆ ಸಂಭವಿಸಿದರೂ, ಪೊಲೀಸರು ತಕ್ಷಣಕ್ಕೆ ಸ್ಪಂದಿಸಿ, ಪರಿಸ್ಥಿತಿಯನ್ನು ಕಂಟ್ರೋಲ್‍ಗೆ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

VIDEO REPORT

ಇಬ್ಬರು ಎಸ್‍ಪಿಗಳ ಆಗಮನ

ಗಲಭೆ ನಿಯಂತ್ರಣ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚುವರಿಯಾಗಿ ಇಬ್ಬರು ಎಸ್‍ಪಿಗಳನ್ನು ನಿಯೋಜಿಸಾಗಿದೆ ಎಂದು ತಿಳಿದು ಬಂದಿದೆ. ಹೊರ ಜಿಲ್ಲೆಯಿಂದ ಬಂದಿರುವ ಇಬ್ಬರು ಎಸ್‍ಪಿಗಳು ಹಳೆ ಶಿವಮೊಗ್ಗದಲ್ಲಿ ರಾತ್ರಿ ಗಸ್ತು ತಿರುಗಿದರು.

ಹೊರ ಜಿಲ್ಲೆಯಿಂದ ಸಿಬ್ಬಂದಿಗಳು

ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಹೆಚ್ಚುವರಿ ಸಿಬ್ಬಂದಿಗಳನ್ನು ಪ್ರಮುಖ ರಸ್ತೆಗಳು, ಸರ್ಕಲ್‍ಗಳು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.

126615369 1008713619608548 6168072243270294966 n.jpg? nc cat=105&ccb=2& nc sid=730e14& nc ohc=MosDq1Hs8ugAX8HmiN1& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment