SHIVAMOGGA LIVE NEWS | 9 ಮಾರ್ಚ್ 2022
ಕಳೆದ ರಾತ್ರಿ ಶಂಕರ ಮಠ ರಸ್ತೆಯಲ್ಲಿ ವ್ಯಕ್ತಿಗೆ ಚಾಕು ಇರಿದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಕೋಟೆ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ದಸ್ತಗಿರ್ (34) ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ.
ಒಂದು ಲಕ್ಷ ಸಾಲ
ಬಾಪೂಜಿ ನಗರದ ಪಾಚಾ ಖಾನ್ ಎಂಬಾತನಿಗೆ ದಸ್ತಗಿರ್ ಒಂದು ಲಕ್ಷ ರೂ. ಸಾಲ ನೀಡಿದ್ದ. ಸಾಲ ಹಿಂತಿರುಗಿಸುವಂತೆ ಪದೇ ಪದೇ ಕೇಳುತ್ತಿದ್ದ. ಆದರೆ ಪಾಚಾ ಖಾನ್ ಹಣ ಕೊಟ್ಟಿರಲಿಲ್ಲ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ವ್ಯಕ್ತಿಗೆ ಚಾಕು ಇರಿತ, ಪರಿಚಿತನಿಂದ ಕೃತ್ಯ
ಮಂಗಳವಾರ ರಾತ್ರಿ ಶಂಕರಮಠ ರಸ್ತೆಯ ಗ್ಯಾಸ್ ಬಂಕ್ ಬಳಿ ಪಾಚಾ ಖಾನ್ ನಡೆದುಕೊಂಡು ಬರುತ್ತಿದ್ದ. ಆಗ ಬೈಕ್’ನಲ್ಲಿ ಬಂದ ದಸ್ತಗಿರ್, ಪಾಚಾ ಖಾನ್’ನನ್ನು ಅಡ್ಡಗಟ್ಟಿದ್ದಾನೆ. ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ್ದಾನೆ. ಹರಿತವಾದ ಆಯುಧದಿಂದ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200