Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಶಿವಮೊಗ್ಗದ ವೈದ್ಯರಿಗೆ ಕರೆ ಮಾಡಿದ ‘BSNL ಅಧಿಕಾರಿ’, ಕರೆ ಕಟ್ ಆಗುತ್ತಿದ್ದಂತೆ ಬ್ಯಾಂಕ್’ನಿಂದ ಬಂತು ಆಘಾತಕಾರಿ ಮೆಸೇಜ್

ಶಿವಮೊಗ್ಗದ ವೈದ್ಯರಿಗೆ ಕರೆ ಮಾಡಿದ ‘BSNL ಅಧಿಕಾರಿ’, ಕರೆ ಕಟ್ ಆಗುತ್ತಿದ್ದಂತೆ ಬ್ಯಾಂಕ್’ನಿಂದ ಬಂತು ಆಘಾತಕಾರಿ ಮೆಸೇಜ್

24/09/2021 8:55 AM
ನಿತಿನ್‌ ಕೈದೊಟ್ಲು

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಸೆಪ್ಟೆಂಬರ್ 2021

 

ಇವತ್ತಿನ ನ್ಯೂಸ್‌
» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗದ ಖಾಸಗಿ ನರ್ಸಿಂಗ್ ಹೋಂ ಒಂದರ ವೈದ್ಯರಿಗೆ ಬಿಎಸ್ಎನ್ಎಲ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ವಂಚಿಸಿದ್ದಾನೆ. ನಿಮ್ಮ ಮೊಬೈಲ್ ನಂಬರ್ ಬ್ಲಾಕ್ ಆಗಲಿದೆ ಎಂದು ಹೆದರಿಸಿ, ಕೆಲವು ಮಾಹಿತಿಗಳನ್ನ ಪಡೆದು, ಅವರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಲಾಗಿದೆ.

ಖಾಸಗಿ ನರ್ಸಿಂಗ್ ಹೋಂನ ವೈದ್ಯರಿಗೆ ಕರೆ ಮಾಡಿದ ವಂಚಕನೊಬ್ಬ ತನ್ನನ್ನು ಬಿಎಸ್ಎನ್ಎಲ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ನಿಮ್ಮ ಮೊಬೈಲ್ ನಂಬರ್ ಬ್ಲಾಕ್ ಆಗಲಿದೆ ಎಂದು ಹೆದರಿಸಿದ್ದಾನೆ.

‘ಆಧಾರ್ ಜೊತೆಗೆ ಲಿಂಕ್ ಮಾಡಿ’

ನಿಮ್ಮ ಮೊಬೈಲ್ ನಂಬರನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಕೊಳ್ಳಿ ಎಂದು ತಿಳಿಸಿದ್ದಾನೆ. ಅದರ ಜೊತೆಗೆ ಕೆಲವು ಮಾಹಿತಿ ಪಡೆದುಕೊಂಡಿದ್ದಾನೆ. ಬಿಎಸ್ಎನ್ಎಲ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿ ಕೇಳಿದ ಮಾಹಿತಿಗಳನ್ನು ವೈದ್ಯರು ಒದಗಿಸಿದ್ದಾರೆ. ಕರೆ ಕಟ್ ಆದ ಕೆಲವೇ ಕ್ಷಣದಲ್ಲಿ ವೈದ್ಯರ ಮೊಬೈಲ್’ಗೆ ಮೆಸೇಜ್ ಬಂದಿದೆ.

ADVT JULY NANJAPPA HOSPITAL HOME LAB TESTING

ವೈದ್ಯರ ಢವಢವ ಹೆಚ್ಚಿಸಿದ ಮೆಸೇಜ್

ವೈದ್ಯರ ಮೊಬೈಲ್’ಗೆ ಬಂದ ಮೆಸೇಜಿನಲ್ಲಿ ಬ್ಯಾಂಕ್ ಖಾತೆಯಿಂದ 49 ಸಾವಿರ ರೂ. ಡ್ರಾ ಆಗಿರುವುದಾಗಿ ತಿಳಿಸಲಾಗಿತ್ತು. ಮೆಸೇಜು ಓದಿದ ವೈದ್ಯರು ಚಕಿತರಾಗಿದ್ದಾರೆ. ಕೂಡಲೆ ತಮ್ಮ ಖಾತೆ ಇರುವ ಬ್ಯಾಂಕ್’ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಆಗಲೆ ತಾವು ವಂಚನೆಗೊಳಗಾಗಿರುವುದು ಅವರ ಅರಿವಿಗೆ ಬಂದಿದ್ದು. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಮೊಬೈಲ್ ಕಂಪನಿಗಳು, ಬ್ಯಾಂಕ್ ಸಿಬ್ಬಂದಿಗಳು ಸೇರಿದಂತೆ ನಾನಾ ನೆಪಗಳನ್ನು ಹೇಳಿಕೊಂಡು ವಂಚಕರು ಕರೆ ಮಾಡುತ್ತಿದ್ದಾರೆ. ಬ್ಯಾಂಕ್ ದಾಖಲೆಗಳು, ಒಟಿಪಿ ಕೋಡ್ ತಿಳಿದುಕೊಂಡು ಹಣ ಲಪಟಾಯಿಸುತ್ತಿದ್ದಾರೆ. ಮೊಬೈಲ್ ನಂಬರ್ ಬ್ಲಾಕ್ ಆಗುವ ಸಂಬಂಧ ಕರೆ ಮಾಡಿದರೆ ಸರ್ವಿಸ್ ಒದಗಿಸುವ ಅಧಿಕೃತ ಶೋರೂಂ ಅಥವಾ ಕಚೇರಿಗೆ ಭೇಟಿ ನೀಡುವುದು ಒಳಿತು. ಬ್ಯಾಂಕ್ ವಿಚಾರವಾಗಿ ಕರೆ ಬಂದರೆ ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವುದು ಸುರಕ್ಷಿತ.

ಅಚ್ಚುಕಟ್ಟಾದ ಮನೆಗೆ ಅಚ್ಚುಕಟ್ಟಾದ ಪೀಠೋಪಕರಣ. ಶಿವಮೊಗ್ಗದಲ್ಲಿ @HOME ಶೋರೂಂ. ಒಮ್ಮೆ ಭೇಟಿ ಕೊಡಿ.

1632381444428179 2

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article 261020 Shimoga Dasara Procession Begins 1 ಶಿವಮೊಗ್ಗದಲ್ಲಿ ಮೈಸೂರು ಮಾದರಿ ವೈಭವದ ದಸರಾಗೆ ಪ್ಲಾನ್, ಒಂಬತ್ತು ದಿನದ ಆಚರಣೆಯಲ್ಲಿ ಏನಿರುತ್ತೆ? ಏನಿರಲ್ಲ?
Next Article Mobile Theft Case General Image ಸವಳಂಗ ರಸ್ತೆಯಲ್ಲಿ ವ್ಯಕ್ತಿಯನ್ನು ಅಡ್ಡಗಟ್ಟಿ ಮೊಬೈಲ್ ಕಸಿದು ಪರಾರಿಯಾದ ಖದೀಮರು

ಇದನ್ನೂ ಓದಿ

hakti-cars-pvt-ltd-shimoga-Toyota-showroom
SHIVAMOGGA CITY

ಶಿವಮೊಗ್ಗದಲ್ಲಿ 2 ದಿನ ಕಾರು ಎಕ್ಸ್‌ಚೇಂಜ್‌ ಮೇಳ, ರೈತರು, ಸರ್ಕಾರಿ ನೌಕರರು, ಕಾರ್ಪೊರೇಟ್‌ ಉದ್ಯೋಗಿಗಳಿಗೆ ಭರ್ಜರಿ ಆಫರ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Tree-cuttion-row-in-Shimoga-city
SHIVAMOGGA CITY

ರಾತ್ರೋರಾತ್ರಿ ಕಾರಿನಲ್ಲಿ ಬಂದು ಫುಟ್‌ಪಾತ್‌ ಮೇಲಿದ್ದ ಮರಕ್ಕೆ ಗರಗಸ ಹಾಕಿದ ದುಷ್ಕರ್ಮಿಗಳು, ಒಬ್ಬ ಅರೆಸ್ಟ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Rain-in-Shimoga-city-today
SHIVAMOGGA CITY

ಶಿವಮೊಗ್ಗ ಸಿಟಿಯಲ್ಲಿ ಗಾಳಿ ಸಹಿತ ಜೋರು ಮಳೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
-Monkey-catches-mobile-phone-at-Nanjappa-Hospital
SHIVAMOGGA CITY

ಶಿವಮೊಗ್ಗದಲ್ಲಿ ಯುವತಿಯ ಮೊಬೈಲ್‌ ಕದ್ದ ಮಂಗ, ಒಂದು ಗಂಟೆ ಮರವೇರಿ ಕುಳಿತು ಪ್ರಹಸನ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Professor-Chandrshekar-felicitated-at-Shimoga
COLLEGE NEWSSHIVAMOGGA CITY

ಕುವೆಂಪು ವಿವಿ ನಿವೃತ್ತ ಪ್ರೊಫೆಸರ್‌ ಚಂದ್ರೇಶೇಖರ್‌ ಅಭಿನಂದನಾ ಸಮಾರಂಭ, ಹೇಗಿತ್ತು? ಯಾರೆಲ್ಲ ಏನೆಲ್ಲ ಮಾತನಾಡಿದರು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
VISL-Contract-Workers-union-meets-Pejavara-seer
BHADRAVATHISHIVAMOGGA CITY

VISL ಕಾರ್ಮಿಕರಿಗೆ ಪೇಜಾವರ ‍ಸ್ವಾಮೀಜಿ ಅಭಯ, ಏನಂದ್ರು ಶ್ರೀಗಳು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Previous Next
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?