SHIVAMOGGA LIVE NEWS | 9 NOVEMBER 2023
SHIMOGA : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೀನಿಯರ್ ಮ್ಯಾನೇಜರ್ (Manager) ಸೋಗಿನಲ್ಲಿ ಕರೆ ಮಾಡಿ ನಿವೃತ್ತ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯಿಂದ 80,501 ರೂ. ಹಣ ಲಪಟಾಯಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗಾಯ್ತು ಈ ವಂಚನೆ?
ಶಿವಮೊಗ್ಗದಲ್ಲಿ ವಾಸವಾಗಿರುವ ನಿವೃತ್ತ ಉದ್ಯೋಗಿಯೊಬ್ಬರ ಮೊಬೈಲ್ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಎಸ್ಬಿಐ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಎಂದು ಪರಿಚಿಯಿಸಿಕೊಂಡಿದ್ದ. ನಿಮ್ಮ ಎಸ್ಬಿಐ ಕ್ರೆಡಿಟ್ ಕಾರ್ಡ್ಗೆ 79 ಸಾವಿರ ರೂ. ಹಣ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದ. ನಿವೃತ್ತ ಉದ್ಯೋಗಿ ಈ ಹಿಂದೆ ಎಸ್ಬಿಐ ಖಾತೆ ಹೊಂದಿದ್ದರು. ಹಾಗಾಗಿ ತಮ್ಮ ಬಳಿ ಎಸ್ಬಿಐ ಖಾತೆ ಇಲ್ಲ. ಕೆನರಾ ಬ್ಯಾಂಕ್ ಖಾತೆ ಹೊಂದಿದ್ದೇನೆ ಎಂದು ತಿಳಿಸಿದರು.
ಎಸ್ಬಿಐ ಕ್ರೆಡಿಟ್ ಕಾರ್ಡ್ನಲ್ಲಿರುವ ಹಣವನ್ನು ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇನೆ ಎಂದು ನಂಬಿಸಿ, ANY DESK APP ಡೌನ್ಲೋಡ್ ಮಾಡಿಸಿದ್ದ. ನಿವೃತ್ತ ಉದ್ಯೋಗಿಯ ಬ್ಯಾಂಕ್ ವಿವರ ಪಡೆದು ಮೂರು ಬಾರಿ ಹಣ ಪಡೆದಿದ್ದಾನೆ. 80,501 ರೂ. ಹಣವನ್ನು ವಂಚಕ ಪಡೆದುಕೊಂಡಿದ್ದಾನೆ. ವಿಷಯ ತಿಳಿಯುತ್ತಲೆ ನಿವೃತ್ತ ಉದ್ಯೋಗಿ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ – ರಾತ್ರೋರಾತ್ರಿ ಸ್ನೇಹಿತನ ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್ 220 ಬೈಕ್ ನಾಪತ್ತೆ