ಗೃಹಿಣಿಗೆ ಅಪರಿಚಿತನಿಂದ ಮೆಸೇಜ್‌, ಫೋನ್‌, ಕೊನೆಗೆ ಕಾದಿತ್ತು ಶಾಕ್‌, ನೀವೂ ಆಗಬಹುದು ಮುಂದಿನ ಟಾರ್ಗೆಟ್‌

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 20 JANUARY 2024

SHIMOGA : ಆನ್‌ಲೈನ್‌ ಟಾಸ್ಕ್‌ ಪೂರೈಸಿದರೆ ಹಣ ಗಳಿಸಬಹುದು ಎಂದು ಮೆಸೇಜ್‌ ಮತ್ತು ಫೋನ್‌ ಕರೆ ಮಾಡಿ ನಂಬಿಸಿ ಶಿವಮೊಗ್ಗದ ಗೃಹಿಣಿಯೊಬ್ಬರಿಗೆ 2.12 ಲಕ್ಷ ರೂ. ವಂಚಿಸಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್‌ ಟಾಸ್ಕ್‌ ಕಂಪ್ಲೀಟ್‌ ಮಾಡಿದರೆ ಹಣ ನೀಡುವುದಾಗಿ ನಂಬಸಿ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿದೆ. ಹೆಚ್ಚಿನ ಹಣದ ಆಮಿಷವೊಡ್ಡಿ ಗೃಹಿಣಿಯಿಂದ (ಹೆಸರು ಗೌಪ್ಯ) ವಿವಿಧ ಬ್ಯಾಂಕ್‌ ಖಾತೆ ಮತ್ತು ಯುಪಿಐ ಮೂಲಕ 2.12 ಲಕ್ಷ ರೂ. ಹಣ ಪಡೆಯಲಾಗಿದೆ. ಆದರೆ ಟಾಸ್ಕ್‌ ಪೂರೈಸಿದ ಹಣವನ್ನಾಗಲಿ, ಗೃಹಿಣಿಯಿಂದ ಪಡೆದ ಹಣವನ್ನಾಗಲಿ ಹಿಂತಿರುಗಿಸದ ಹಿನ್ನೆಲೆ ಅನುಮಾನಗೊಂಡಿದ್ದಾರೆ. ಘಟನೆ ಸಂಬಂಧ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಟಾಸ್ಕ್‌ ಹೆಸರಲ್ಲಿ ವಂಚನೆ ಇದೇ ಮೊದಲಲ್ಲ

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಟಾಸ್ಕ್‌ ಪೂರೈಸಿ ಹಣ ಸಂಪಾದಿಸಬಹುದು ಎಂದು ಆಮಿಷವೊಡ್ಡಿ ವಂಚನೆ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಹಲವರು ಈ ವಂಚಕರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಸಣ್ಣಪುಟ್ಟ ಟಾಸ್ಕ್‌ ನೀಡಿ, ಹಣವನ್ನು ವರ್ಗಾಯಿಸುತ್ತಾರೆ. ವಿಶ್ವಾಸ ಗಿಟ್ಟಿಸಿಕೊಂಡ ಬಳಿಕ ಹಣ ಹೂಡಿಕೆ ಮಾಡಿ ಹೆಚ್ಚುವರಿ ಸಂಪಾದಿಸಬಹುದು ಎಂದು ನಂಬಿಸುತ್ತಾರೆ. ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿಸಿಕೊಂಡು, ಟಾಸ್ಕ್‌ ನೀಡಿ, ಬಳಿಕ ಹಣವನ್ನು ಮರಳಿಸದೆ ವಂಚಿಸಲಾಗುತ್ತಿದೆ.

ಇದನ್ನೂ ಓದಿ – ಸಕ್ರೆಬೈಲು ಬಳಿ ಮರಕ್ಕೆ ಬೈಕ್‌ ಡಿಕ್ಕಿ, ಸ್ಥಳದಲ್ಲೇ ಸಾವನ್ನಪ್ಪಿದ ಶಿವಮೊಗ್ಗದ ಕಾಲೇಜು ವಿದ್ಯಾರ್ಥಿ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment