
ಶಿವಮೊಗ್ಗ ಲೈವ್.ಕಾಂ | SORABA | 13 ಏಪ್ರಿಲ್ 2020
ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಬೆಂಗಳೂರಿನಿಂದ ಜನರನ್ನು ಕರೆತಂದಿದ್ದ ಆಂಬುಲೆನ್ಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಬುಲೆನ್ಸ್ ಚಾಲಕ ಮತ್ತು ಅದರಲ್ಲಿ ಬಂದಿದ್ದ ಮೂವರ ವಿರುದ್ಧ ಕೇಸ್ ಬಿದ್ದಿದೆ.
ಯಾವ ಊರಿಗೆ ಬಂದಿದ್ದದರು?
ಲಾಕ್‌ಡೌನ್ ಹಿನ್ನೆಲೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳುವುದು ನಿಷೇಧ. ಆದರೂ ಬೆಂಗಳೂರಿನಿಂದ ಸೊರಬದ ಕಾನಕೇರಿಗೆ ಮೂವರನ್ನು ಬಂದಿದ್ದರು. ಇವರೆಲ್ಲ ಭಾನುವಾರ ಆಂಬುಲೆನ್ಸ್‌ನಲ್ಲಿ ತಮ್ಮ ಊರಿಗೆ ಬಂದಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸೊರಬ ಠಾಣೆ ಪೊಲೀಸರು ಆಂಬುಲೆನ್ಸ್ ವಾಹನವನ್ನು ವಶಕ್ಕೆ ಪಡಿದ್ದಾರೆ.
ಡ್ರೈವರ್, ಪ್ರಯಾಣಿಕರ ಮೇಲೆ ಕೇಸ್
ಲಾಕ್‌ಡೌನ್ ಆದೇಶವನ್ನು ಉಲ್ಲಂಘನೆ ಮಾಡಿ, ಆಂಬುಲೆನ್ಸ್‌ನಲ್ಲಿ ಪ್ರಯಾಣಿಕರನ್ನು ಕರೆತಂದು, ಕರ್ತವ್ಯ ಲೋಪ ಎಸಗಿದ ಹಿನ್ನೆಲೆ, ಚಾಲಕ ಬೆಂಗಳೂರಿನ ಕೆ.ಬಿ.ಮೋಹನ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇನ್ನು ಆಂಬುಲೆನ್ಸ್‌ನಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಮೂವರ ವಿರುದ್ಧವೂ ಕೇಸ್ ಹಾಕಲಾಗಿದೆ.
ಕಡೇಕಲ್‌ಗೆ ಬಂದವರ ಮೇಲೂ ಕೇಸ್
ಇತ್ತೀಚೆಗಷ್ಟೇ ಭದ್ರಾವತಿ ಅನ್ವರ್ ಕಾಲೋನಿ ನಿವಾಸಿ ಆಂಬುಲೆನ್ಸ್ ಚಾಲಕ ಸಯ್ಯದ್ ಖಾಸಿಂ ವಿರುದ್ಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನಿಂದ ಐವರನ್ನು ಶಿವಮೊಗ್ಗದ ಕಡೇಕಲ್ ಗ್ರಾಮಕ್ಕೆ ಕರೆತಂದಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]