ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 NOVEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
BHADARAVATHI : ಬೈಕ್ ಇನ್ಷುರೆನ್ಸ್ (Bike insurance) ದಾಖಲೆಯಲ್ಲಿ ದಿನಾಂಕ ತಿರುಚಿದ ಆರೋಪದ ಹಿನ್ನೆಲೆ ವ್ಯಕ್ತಿಯೊಬ್ಬನ ವಿರುದ್ಧ ಇನ್ಷುರೆನ್ಸ್ ಕಂಪನಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದೆ. ನ್ಯಾಯಾಲಯದ ಸೂಚನೆಯ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಏನಿದು ಪ್ರಕರಣ?
ಭದ್ರಾವತಿಯ ವ್ಯಕ್ತಿಯೊಬ್ಬನ (ಹೆಸರು ಗೌಪ್ಯ) ಬೈಕ್ 2021 ಜುಲೈ 21ರಂದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ದತ್ತಾತ್ರೇಯ ಎಂಬುವವರು ಗಾಯಗೊಂಡಿದ್ದರು. ಅವರು ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬೈಕ್ ಮಾಲೀಕ ತನ್ನ ವಾಹದ ದಾಖಲೆಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದ. ಆತನ ಬೈಕ್ ಇನ್ಷುರೆನ್ಸ್ (Bike insurance) ವಾಯಿದೆ 2020ರ ಡಿಸೆಂಬರ್ 8 ರಿಂದ 2021ರ ಡಿಸೆಂಬರ್ 7ರವರೆಗೆ ಎಂದು ದಾಖಲಾಗಿತ್ತು.
ಇದನ್ನೂ ಓದಿ- ಸಾಗರದಲ್ಲಿ ಸರ್ಕಾರಿ ನೌಕರರ ಪ್ರತಿಭಟನೆ, 24 ಗಂಟೆ ಗಡುವು, ಕರ್ತವ್ಯಕ್ಕೆ ಗೈರಾಗಿ ಹೋರಾಟದ ಎಚ್ಚರಿಕೆ
ಪರಿಹಾರ ನೀಡುವಂತೆ ಇನ್ಷುರೆನ್ಸ್ ಕಂಪನಿಗೆ ನ್ಯಾಯಾಲಯ ಸೂಚಿಸಿತ್ತು. ಪಾಲಿಸಿ ನಂಬರ್ ಪರಿಶೀಲಿಸಿದ ಇನ್ಷುರೆನ್ಸ್ ಕಂಪನಿ ಬೈಕ್ ಮಾಲೀಕ ಒದಗಿಸಿರುವ ದಾಖಲೆಯಲ್ಲಿ ದಿನಾಂಕ ತಿದ್ದಿರುವುದನ್ನು ಪತ್ತೆ ಹಚ್ಚಿದೆ. ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಗೆ ತನ್ನ ಕೈಯಿಂದ ಪರಿಹಾರ ಕೊಡಬೇಕಾಗುತ್ತದೆ ಎಂದು ಬೈಕ್ ಮಾಲೀಕ ಪಾಲಿಸಿಯ ದಿನಾಂಕವನ್ನು ತಿದ್ದಿದ್ದಾನೆ ಎಂದು ಆರೋಪಿಸಲಾಗಿದೆ.
2018ರ ಏಪ್ರಿಲ್ 10 ರಿಂದ 2019ರ ಏಪ್ರಿಲ್ 9ರವರೆಗೆ ಇನ್ಷುರೆನ್ಸ್ ಮಾಡಿಸಲಾಗಿತ್ತು. ಆದರೆ ಆತ ಅದನ್ನು 2020ರ ಡಿಸೆಂಬರ್ 8 ರಿಂದ 2021ರ ಡಿಸೆಂಬರ್ 7ರವರೆಗೆ ಎಂದು ತಿದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ, ನ್ಯೂ ಇಂಡಿಯಾ ಅಷುರೆನ್ಸ್ ಕಂಪನಿ, ಪಾಲಿಸಿಯ ದಿನಾಂಕ ತಿದ್ದಿರುವ ಆರೋಪದ ಹಿನ್ನೆಲೆ ಬೈಕ್ ಮಾಲೀಕನ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.