ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಸೆಪ್ಟೆಂಬರ್ 2021
ಶಿವಮೊಗ್ಗದ ಟಿಪ್ಪುನಗರದಲ್ಲಿ ಕಳೆದ ರಾತ್ರಿ ನಡೆದ ಹತ್ಯೆ ಪ್ರಕರಣ ಸಂಬಂಧ, ಕೆಲವೇ ಗಂಟೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಪ್ರಕರಣಗಳ ಸಂಬಂಧ ನಡೆದ ಗಲಾಟೆಯೇ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಯುವಕನ ಬರ್ಬರ ಕೊಲೆ, ಚರಂಡಿಯಲ್ಲಿ ಮೃತದೇಹ ಪತ್ತೆ
ಮಾರ್ನಮಿ ಬೈಲು ನಿವಾಸಿ ಇರ್ಫಾನ್ (28) ಎಂಬಾತನನ್ನು ಕೊಲೆ ಮಾಡಲಾಗಿತ್ತು. ಎದೆ, ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ತಿವಿದು ಹತ್ಯೆ ಮಾಡಲಾಗಿತ್ತು. ಟಿಪ್ಪು ನಗರದ ಏಳನೆ ತಿರುವಿನ 4ನೇ ಅಡ್ಡರಸ್ತೆಯಲ್ಲಿ ಪ್ರಕರಣಗಳ ಸಂಭವಿಸಿತ್ತು.
ಹತ್ಯೆಗೂ ಮೊದಲು ಗಲಾಟೆ
ಅಸಾದ್ ಮತ್ತು ಶಾಬೀರ್ ಎಂಬುವವರ ಮಧ್ಯೆ ಗಾಂಜಾ ದಂಧೆ ಸಂಬಂಧ ಜಗಳವಾಗಿದೆ. ಇಬ್ಬರ ಬೆಂಬಲಿಗರು ಗಲಾಟೆ ವೇಳೆ ಇದ್ದರು. ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಈ ವೇಳೆ ಇರ್ಫಾನ್ ತನ್ನ ಬಳಿ ಇದ್ದ ಚಾಕ ತೆಗೆದು ಎದುರಾಳಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದ.

ತನ್ನದೇ ಚಾಕುವಿನಿಂದ ಹತ್ಯೆಯಾದ
ಚಾಕುವಿನಿಂದ ಇರಿದಿದ್ದ ಇರ್ಫಾನ್ ವಿರುದ್ಧ ತಿರುಗಿಬಿದ್ದ ಎದುರಾಳಿಗಳು, ಆತ ತಂದಿದ್ದ ಚಾಕುವನ್ನು ಕಸಿದುಕೊಂಡಿದ್ದಾರೆ. ಅದೇ ಚಾಕುವಿನಿಂದ ಇರ್ಫಾನ್’ನ ಎದೆ, ಹೊಟ್ಟೆ ಭಾಗಕ್ಕೆ ತಿವಿದು, ಚರಂಡಿಗೆ ತಳ್ಳಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಇರ್ಫಾನ್ ಮೃತಪಟ್ಟಿದ್ದಾನೆ. ಘಟನೆಯಾಗುತ್ತಿದ್ದಂತೆ ಉಳಿದವರು ಸ್ಥಳದಿಂದ ಕಾಲು ಕಿತ್ತಿದ್ದಿದ್ದಾರೆ.
ಕೆಲವೇ ಹೊತ್ತಲ್ಲಿ ನಾಲ್ವರು ಅರೆಸ್ಟ್
ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆ ಆರಂಭಿಸಿದ ಪೊಲೀಸರು ಕೆಲವೇ ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
LATEST NEWS
- ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಧಗಧಗ ಹೊತ್ತಿ ಉರಿದ ಮುಂಭಾಗ

- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





