ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಆಗಸ್ಟ್ 2020
ಗಾಂಜಾ ಬೆಳೆಗಾರರು ಮತ್ತು ಮಾರಾಟಗಾರರ ವಿರುದ್ಧ ಪೊಲೀಸರು ದಾಳಿ ಮುಂದುವರೆಸಿದ್ದಾರೆ. ಮಾರಾಟದ ಉದ್ದೇಶಕ್ಕೆ 17 ಕೆ.ಜಿ. ಗಾಂಜಾ ಬೆಳೆದಿದ್ದ ಇಬ್ಬರನ್ನು ಕುಂಸಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಯಾರೆಲ್ಲ ಬಂಧಿತರು? ಎಷ್ಟು ಗಾಂಜಾ ಬೆಳೆದಿದ್ದರು?
ಎಂಟು ಕೆ.ಜಿ. ಗಾಂಜಾ ವಶಕ್ಕೆ | ದೊಡ್ಡಮಟ್ಟಿ ಗ್ರಾಮದ ರಾಜೇಶ್ (30) ಎಂಬಾತ ಮನೆ ಆವರಣದಲ್ಲಿ 16 ಸಾವಿರ ರೂ. ಮೌಲ್ಯದ 8 ಕೆ.ಜಿ.ಯಷ್ಟು ಗಾಂಜಾ ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.
ಒಂಭತ್ತು ಕೆ.ಜಿ.ಗಾಂಜಾ ವಶಕ್ಕೆ | ದೊಡ್ಡಮಟ್ಟಿ ಗ್ರಾಮದ ದುರ್ಗಪ್ಪ (45) ಎಂಬಾತನನ್ನು ಬಂಧಿಸಲಾಗಿದ್ದು, ಮನೆ ಆವರಣದಲ್ಲಿ ಬೆಳೆದಿದ್ದ 9 ಕೆ.ಜಿ. ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯದ 18 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಇಬ್ಬರ ವಿರುದ್ಧ ಎನ್‍ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ಚೇತರಿಸಿಕೊಂಡು ಫೀಲ್ಡಿಗಿಳಿದ ಪಿಎಸ್ಐ
ಇತ್ತೀಚೆಗೆ ಗಾಂಜಾ ಬೆಳೆಗಾರರ ಬಂಧನಕ್ಕೆ ತೆರಳಿದ್ದ ವೇಳೆ ಪಿಎಸ್ಐ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಬೆಳಗಾರರು ದಾಳಿ ಮಾಡಿದ್ದರು. ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದ ಹಿನ್ನೆಲೆ ಕುಂಸಿ ಠಾಣೆ ಪಿಎಸ್ಐ ನವೀನ್ ಕುಮಾರ್ ಮಠಪತಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾಗಿ, ಚೇತರಿಸಿಕೊಂಡ ಪಿಎಸ್ಐ, ಗಾಂಜಾ ಬೆಳೆಗಾರರ ಹೆಡಮುರಿ ಕಟ್ಟಲು ದಾಳಿ ಮುಂದುವರೆಸಿದ್ದಾರೆ.
ಡಿವೈಎಸ್‍ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ, ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]