ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ, ಅವುಗಳನ್ನು ಸೈಬರ್ ವಂಚನೆಗೆ ಬಳಸಿಕೊಳ್ಳುತ್ತಿದ್ದ ಅಂತರರಾಜ್ಯ ಮಟ್ಟದ ಜಾಲವನ್ನು (cyber fraud gang) ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಕೋಟ್ಯಂತರ ರೂಪಾಯಿ ವಂಚನೆಯ ದಂಧೆ ಬೆಳಕಿಗೆ ಬಂದಿದೆ.
ವಿಲ್ಸನ್.ವಿ ಎಂಬುವವರಿಗೆ ಕಮಿಷನ್ ಆಸೆ ತೋರಿಸಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿತ್ತು. ನಂತರ ಆರೋಪಿ ಜಗದೀಶ ಎಂಬಾತ ವಿಲ್ಸನ್ ಅವರಂತೆ ನಟಿಸಿ, ಆ ಖಾತೆಯನ್ನು ಲಕ್ಷಾಂತರ ರೂಪಾಯಿ ವಂಚನೆಯ ಹಣ ವರ್ಗಾವಣೆ ಮಾಡಲು ದುರುಪಯೋಗಪಡಿಸಿಕೊಂಡಿದ್ದನು. ಈ ಬಗ್ಗೆ ಫೆಬ್ರವರಿ 9ರಂದು ದೂರು ದಾಖಲಾಗಿತ್ತು.
ಮೂವರು ಆರೋಪಿಗಳು ಅರೆಸ್ಟ್
ತನಿಖೆ ನಡೆಸಿದ ಶಿವಮೊಗ್ಗದ ಸಿ.ಇ.ಎನ್ ಠಾಣೆ ಪೊಲೀಸರು, ಶಿವಮೊಗ್ಗದ ಶರಾವತಿ ನಗರದ ಎಲೆಕ್ಟ್ರಾನಿಕ್ಸ್ ವ್ಯಾಪಾರಿ ಜಗದೀಶ್ ಆರ್. ಸಿ (43), ಚಿಕ್ಕಮಗಳೂರಿನ ಮೀನು ವ್ಯಾಪಾರಿ ಅರ್ಷಾದ್ (39), ಶಿವಮೊಗ್ಗ ಹೊಸಮನೆಯ ಮಾರ್ಕೆಟಿಂಗ್ ನೆಟ್‌ವರ್ಕ್ ಕೆಲಸದ ಅನಂತ ಟಿ. (34) ಎಂಬುವವರನ್ನು ಬಂಧಿಸಿದ್ದಾರೆ.

ಕೋಟಿ ಕೋಟಿ ಹಣ ವಂಚನೆ ಕೇಸ್
- 352 ಪ್ರಕರಣಗಳು: ಆರೋಪಿಗಳ ಬಳಿ ಪತ್ತೆಯಾದ 15 ಮ್ಯೂಲ್ ಖಾತೆಗಳ ಮೇಲೆ ದೇಶಾದ್ಯಂತ ಒಟ್ಟು 352ಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ.
- ₹82 ಕೋಟಿ ವಂಚನೆ: ಈ ಖಾತೆಗಳ ಮೂಲಕ ದೇಶಾದ್ಯಂತ ಸುಮಾರು ₹82,00,15,712 ಹಣ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ.
- ವರ್ಗಾವಣೆಯಾದ ಹಣ: ಕೇವಲ ಈ 15 ಖಾತೆಗಳಲ್ಲೇ ಸುಮಾರು ₹14,71,91,174ಹಣ ವರ್ಗಾವಣೆಯಾಗಿದೆ.
ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್ ಫೋನ್‌ಗಳು, 11 ಎಟಿಎಂ ಕಾರ್ಡ್‌ಗಳು, 9 ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳು, 15 ಏರ್‌ಟೆಲ್ ಸಿಮ್ ಕಾರ್ಡ್‌ಗಳು ಮತ್ತು 15 ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ರವೀಂದ್ರ ನಗರದಲ್ಲಿ ರಾತ್ರಿ ನಿಲ್ಲಿಸಿದ್ದ ಬೈಕ್ ಮಿಸ್ಸಿಂಗ್, ಆಗಿದ್ದೇನು?
ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LATEST NEWS
- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

- ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್, 1 ಕೆ.ಜಿ ಬಕೆಟ್ ಮೊಸರು ಮಾರುಕಟ್ಟೆಗೆ ಎಂಟ್ರಿ, ಎಷ್ಟಿರುತ್ತೆ ರೇಟ್?

- ‘ಒಂದು ಕೋಟಿ ರುಪಾಯಿ ನೆರವು, ಸರ್ಕಾರಿ ನೌಕರಿ ಕೊಡಬೇಕು’, ಕುರುಬರ ವೇದಿಕೆ ಪಟ್ಟು

- ಸಚಿವ ಮಧು ಬಂಗಾರಪ್ಪ ಜನ್ಮದಿನ, ವಿದ್ಯಾರ್ಥಿಗಳು, ಪೌರ ಕಾರ್ಮಿಕರಿಗೆ ವಿಮಾನಯಾನ

- ವಾಸವಿ ಯುವಜನ ಸಂಘದ ಅಧ್ಯಕ್ಷರಾಗಿ ಶ್ರೀನಾಗ್, ಕನ್ನಿಕಾ ಸಖಿಯರ ಸಂಘದ ಅಧ್ಯಕ್ಷ ಶ್ವೇತಾ ಸಂದೀಪ್

About The Editor
ನಿತಿನ್ ಆರ್.ಕೈದೊಟ್ಲು





