ವಿನೋಬನಗರ 100 ಅಡಿ ರಸ್ತೆಯ ಓಣಿ ಮೇಲೆ ಡಿವೈಎಸ್’ಪಿ ನೇತೃತ್ವದಲ್ಲಿ ದಾಳಿ, ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರು ಅರೆಸ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022

ಓಣಿಯೊಂದರಲ್ಲಿ ಓ.ಸಿ. ಮಟ್ಕಾ ಜೂಜಾಟ ಆಡಿಸುತ್ತಿದ್ದವರ ಮೇಲೆ ಶಿವಮೊಗ್ಗ ಡಿವೈಎಸ್’ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಇಬ್ಬರು ವಿದ್ಯಾರ್ಥಿಗಳು ಸೇರಿದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.

nanjappa hospital health package

ವಿನೋಬನಗರ ನೂರು ಅಡಿ ರಸ್ತೆಯ ಮಟನ್ ಸ್ಟಾಲ್ ಒಂದರ ಪಕ್ಕದ ಓಣಿಯಲ್ಲಿ ಓ.ಸಿ. ಮಟ್ಕಾ ಜೂಜಾಟ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಡಿವೈಎಸ್’ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದ ತಂಡ ದಾಳಿ ನಡೆಸಿದೆ.

ನಾಲ್ವರ ಪೈಕಿ ಇಬ್ಬರು ಯುವಕರು ಅದೃಷ್ಟ ಪರೀಕ್ಷೆ ಮಾಡುವಂತೆ ಸಾರ್ವಜನಿಕರನ್ನು ಕರೆಯುತ್ತಿದ್ದರು. ಒಬ್ಬಾತ ಚೀಟಿ ಬರೆದು ಕೊಡುತ್ತಿದ್ದ. ಇನ್ನೊಬ್ಬ ಹಣ ಸಂಗ್ರಹಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಸಂಬಂಧ ಕಾರು ಚಾಲಕ ವಿನಯ್ (27), ಸೂರಜ್ (24), ರಾಕೇಶ್ (20), ಚಂದನ್ (23) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಇಬ್ಬರು ವಿದ್ಯಾರ್ಥಿಗಳಾಗಿದ್ದಾರೆ.

ಬಂಧಿತರಿಂದ ಐದು ಮೊಬೈಲ್ ಫೋನ್, 19,750 ರೂ. ನಗದು, ಒಂದು ಬೈಕ್, ಓ.ಸಿ. ಮಟ್ಕಾ ಬರೆಯಲು ಬಳಸಿದ್ದ ಚೀಟಿ, ಪೆನ್’ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

about smg live readers

Shimoga PoliceAbout Shivamogga Live

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment