SHIVAMOGGA LIVE NEWS | 14 AUGUST 2023
SHIMOGA : ಕಟಾವು ಮಾಡಿ, ಮಾಂಸ ಮಾರಾಟದ ಉದ್ದೇಶದಿಂದ ಗೋವುಗಳನ್ನು (Cow) ತಂದು ಕಟ್ಟಿಕೊಂಡಿರುವ ಖಚಿತ ಮಹಿತಿ ಮೇರೆಗೆ ಪೊಲೀಸರು ದಾಳಿ (Police Raid) ನಡೆಸಿದ್ದಾರೆ. ಒಂದು ಎಮ್ಮೆ, ಐದು ಗೋವುಗಳನ್ನು ವಶಕ್ಕೆ ಪಡೆಲಾಗಿದೆ.
ಶಿವಮೊಗ್ಗದ ಲಷ್ಕರ್ ಮೊಹಲ್ಲಾದ (Lashkar Mohalla) ಕೊಟ್ಟಿಗೆಯೊಂದರ ಮೇಲೆ ಕೋಟೆ ಠಾಣೆ ಇನ್ಸ್ಪೆಕ್ಟರ್ ಶಿವಪ್ರಸಾದ್ ರಾವ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪೊಲೀಸರು ಬಂದಿದ್ದನ್ನು ಕಂಡು ಕೊಟ್ಟಿಗೆಯಲ್ಲಿದ್ದ ಒಬ್ಬಾತ ಪರಾರಿಯಾಗಿದ್ದಾನೆ. ಪರಿಶೀಲನೆ ನಡೆಸಿದಾಗ ಕೊಟ್ಟಿಗೆಯಲ್ಲಿ ಐದು ಗೋವುಗಳು, ಒಂದು ಎಮ್ಮೆ ಪತ್ತೆಯಾಗಿದೆ. ಇವುಗಳ ಅಂದಾಜು ಮೌಲ್ಯ 60 ಸಾವಿರ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ರಾತ್ರೋರಾತ್ರಿ ರೆಸಾರ್ಟ್ ಮೇಲೆ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ, ಏನೇನೆಲ್ಲ ಸಿಕ್ತು?
ಕಟಾವು ಮಾಡಿ, ಮಾಂಸ ಮಾರಾಟ ಉದ್ದೇಶದಿಂದ ಗೋವುಗಳನ್ನು ತಂದು ಕಟ್ಟಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.