ಶಿವಮೊಗ್ಗದಲ್ಲಿ ಎರಡು ಕ್ಲಬ್‌ಗಳ ಮೇಲೆ ಪೊಲೀಸರ ದಾಳಿ, 19 ಜನ ಅರೆಸ್ಟ್‌, ನಗದು, ಮೊಬೈಲ್‌, ಬೈಕ್‌ಗಳು ಸೀಜ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 MAY 2024

SHIMOGA : ನಗರದ ಎರಡು ಕ್ಲಬ್‌ಗಳ (clubs) ಮೇಲೆ ಪೊಲೀಸರು ದಾಳಿ ನಡೆಸಿ 19 ಮಂದಿಯನ್ನು ಬಂಧಿಸಿದ್ದಾರೆ. ನಗದು, ಮೊಬೈಲ್‌, ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ  ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಕೇಸ್‌ 1 : 13 ಮಂದಿ ಬಂಧನ

ಕಟ್ಟೆ ಸುಬ್ಬಣ್ಣ ಬಳಿ ಇರುವ ಭೈರವ ಫ್ರೆಂಡ್ಸ್‌ ಕ್ಲಬ್‌ನಲ್ಲಿ ಅಂದರ್‌ ಬಾಹರ್‌ ಇಸ್ಪೀಟು ಜೂಜಾಟ ಆಡಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. 13 ಮಂದಿಯನ್ನು ಬಂಧಿಸಲಾಗಿದೆ. ಜೂಜಾಟದಲ್ಲಿ ತೊಡಗಿಸಿದ್ದ 6,700 ರೂ. ನಗದು, 14 ಮೊಬೈಲ್‌, 4 ಬೈಕ್‌, ಇಸ್ಪೀಟ್‌ ಕಾರ್ಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಕೇಸ್‌ 2 : 6 ಮಂದಿ ಅರೆಸ್ಟ್‌

ಆಟೋ ಕಾಂಪ್ಲೆಕ್ಸ್‌ ಬಳಿ ಇರುವ ಮೀಡಿಯಾ ಕ್ಲಬ್‌ನಲ್ಲಿ ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. 6 ಮಂದಿಯನ್ನು ಬಂಧಿಸಲಾಗಿದೆ. ಜೂಜಾಟದಲ್ಲಿ ತೊಡಗಿಸಿದ್ದ 5,900 ರೂ. ನಗದು, 7 ಮೊಬೈಲ್‌ ಫೋನ್‌, 5 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.‌

ಇದನ್ನೂ ಓದಿ – ಆಗುಂಬೆ ಘಾಟಿ, ಸೋಮೇಶ್ವರದಲ್ಲಿ KSRTC ಬಸ್‌ ಅಡ್ಡಗಟ್ಟಿದ ಕೇರಳದ ಯುವಕರು, ಡ್ರೈವರ್‌ ಮೇಲೆ ಹಲ್ಲೆ

ಇನ್ಸ್‌ಪೆಕ್ಟರ್‌ ಚಂದ್ರಕಲಾ ನೇತೃತ್ವದಲ್ಲಿ ವಿನೋಬನಗರ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment