SHIVAMOGGA LIVE NEWS | 24 OCTOBER 2023
SHIMOGA : ಓತಿಘಟ್ಟದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಾಳಿ (Raid) ನಡೆಸಿ ಬೀಡಿ, ಮೊಬೈಲ್, ಬೆಂಕಿ ಪೊಟ್ಟಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ಸೂಚನೆ ಮೇರೆಗೆ ಡಿವೈಎಸ್ಪಿ, ವಿವಿಧ ಠಾಣೆಗಳ ಇನ್ಸ್ಪೆಕ್ಟರ್ಗಳು, ಪಿಎಸ್ಐಗಳು, ಸಿಬ್ಬಂದಿ, ಡಿಎಆರ್ ಸಿಬ್ಬಂದಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದರು.
ಗಾರ್ಡನ್ನಲ್ಲಿ ಸಿಕ್ತು ಮಂಗಳೂರು ಬೀಡಿ, ಮೊಬೈಲ್
ಜೈಲಿನ ಬ್ಲಾಕ್ಗಳಲ್ಲಿ ಎಲ್ಲ ಸೆಲ್ಗಳಲ್ಲಿಯು ತಪಾಸಣೆ ನಡೆಸಲಾಯಿತು. ತುಂಗಾ ಬ್ಲಾಕ್ನ ಕೊಠಡಿ ಸಂಖ್ಯೆ 12ರ ಮುಂಭಾಗ ಕೈತೋಟದಲ್ಲಿ ಗಿಡಗಳ ಮಧ್ಯೆ ತಪಾಸಣೆ ವೇಳೆ ಗುಂಡಿ ತೆಗೆದು ಮುಚ್ಚಿರುವುದು ಕಂಡು ಬಂದಿದೆ. ಮಣ್ಣು ಅಗೆದು ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರ್ನಲ್ಲಿ ಮುಚ್ಚಿಟ್ಟಿದ್ದ ಮೊಬೈಲ್ ಪತ್ತೆಯಾಗಿದೆ. ಅದರಲ್ಲಿ ಯಾವುದೆ ಸಿಮ್ ಇರಲಿಲ್ಲ.
ಇದನ್ನೂ ಓದಿ – INSTAದಲ್ಲಿ ಯುವತಿ ನಕಲಿ ಖಾತೆ, ಪ್ರಿಯಕರನ ಮೇಲೆ ಶಂಕೆ, FACEBOOKನಲ್ಲಿ ಗೃಹಿಣಿಯ ತೇಜೋವಧೆ
ಇನ್ನು, ಸೆಲ್ ನಂಬರ್ 36ರ ಸಮೀಪ ಗಿಡಗಳ ಮಧ್ಯೆ ಮಂಗಳೂರು ಸ್ಪೆಷಲ್ ಬೀಡಿಗಳು, ಬೆಂಕಿ ಪೊಟ್ಟಣ, ಯುಎಸ್ಬಿ ಚಾರ್ಜರ್ ಕೇಬಲ್, ಚಿಕ್ಕ ಬ್ಲೇಡ್, ಚಿಲುಮೆಗಳು, ಕತ್ತರಿ ಪತ್ತೆಯಾಗಿದೆ. ಇವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದು, ತನಿಖೆ ನಡೆಯುತ್ತಿದೆ.