SHIVAMOGGA LIVE NEWS | 18 AUGUST 2023
SHIMOGA : ಹಾಫ್ ಹೆಲ್ಮೆಟ್ (Half Helmet) ವಿರುದ್ಧ ಸಂಚಾರ ಠಾಣೆ ಪೊಲೀಸರು ಮತ್ತೊಮ್ಮೆ ದಿಢೀರ್ ಕಾರ್ಯಾಚರಣೆ ನಡೆಸಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ (Mithun Kumar IPS) ಖುದ್ದಾಗಿ ರಸ್ತೆಗಿಳಿದು ಹಾಫ್ ಹೆಲ್ಮೆಟ್ಗಳನ್ನು ವಶಕ್ಕೆ ಪಡೆದರು.
ಶಿವಮೊಗ್ಗದ ಗೋಪಿ ಸರ್ಕಲ್ನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಹಾಫ್ ಹೆಲ್ಮೆಟ್ (Half Helmet) ಕಾರ್ಯಾಚರಣೆ ನಡೆಸಲಾಯಿತು. ಐಎಸ್ಐ ಗುರುತು ಇಲ್ಲದ ಅಸುರಕ್ಷಿತ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದವರನ್ನು ಸಂಚಾರ ಠಾಣೆ ಪೊಲೀಸರು ತಡೆದರು. ಹಾಫ್ ಹೆಲ್ಮೆಟ್ಗಳನ್ನು ವಶಕ್ಕೆ ಪಡೆದರು.
ಇದನ್ನೂ ಓದಿ –ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, ರಾಶಿ ರಾಶಿ ಹಾಫ್ ಹೆಲ್ಮೆಟ್ ವಶಕ್ಕೆ, ವಿಡಿಯೋಗಳು ವೈರಲ್
ರಾಶಿ ರಾಶಿ ಹಾಫ್ ಹೆಲ್ಮೆಟ್ ಸೀಜ್
ಕೆಲವು ದಿನದ ಹಿಂದೆ ಹಾಫ್ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ನಡೆಸಿ ರಾಶಿಗಟ್ಟಲೆ ಹೆಲ್ಮೆಟ್ಗಳನ್ನು ವಶಕ್ಕೆ ಪಡೆಯಲಾಗಿತ್ತು. ಇವತ್ತು ಕೂಡ ಕಾರ್ಯಾಚರಣೆ ನಡೆಸಿ ಗೋಪಿ ಸರ್ಕಲ್ನಲ್ಲಿ ಹಾಫ್ ಹೆಲ್ಮೆಟ್ಗಳನ್ನು ವಶಕ್ಕೆ ಪಡೆದರು. ಸರ್ಕಲ್ನಲ್ಲಿ ಹಾಫ್ ಹೆಲ್ಮೆಟ್ಗಳ ರಾಶಿ ಹಾಕಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹೆಲ್ಮೆಟ್ಗೆ ಡಿಮಾಂಡಪ್ಪೋ ಡಿಮಾಂಡ್, ನಾಲ್ಕೈದು ಪಟ್ಟು ಏರಿದ ಸೇಲ್ಸ್, ಯಾವ ಹೆಲ್ಮೆಟ್ಗೆ ಹೆಚ್ಚಿದೆ ಬೇಡಿಕೆ?
ಫೀಲ್ಡಿಗಿಳಿದ ಜಿಲ್ಲಾ ರಕ್ಷಣಾಧಿಕಾರಿ
ಹಾಫ್ ಹೆಲ್ಮೆಟ್ ವಿರುದ್ಧದ ಕಾರ್ಯಾಚರಣೆಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಖುದ್ದು ಫೀಲ್ಡಿಗಿಳಿದಿದ್ದರು. ಅಸುರಕ್ಷಿತ ಹೆಲ್ಮೆಟ್ಗಳನ್ನು ವಶಕ್ಕೆ ಪಡೆದು, ದ್ವಿಚಕ್ರ ವಾಹನ ಸವಾರರಿಗೆ ತಿಳಿವಳಿಕೆ ಮೂಡಿಸಿದರು.
ಕಾರ್ಯಾಚರಣೆ ಇದೆ ಮೊದಲಲ್ಲ
ಕೆಲವು ದಿನದ ಹಿಂದೆ ಶಿವಮೊಗ್ಗ ನಗರದ ವಿವಿಧೆಡೆ ಮತ್ತು ಭದ್ರಾವತಿ ಪಟ್ಟಣದಲ್ಲಿ ಹಾಫ್ ಹೆಲ್ಮೆಟ್ ವಿರುದ್ಧ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ದ್ವಿಚಕ್ರ ವಾಹನ ಸವಾರರ ಬಳಿ ಇದ್ದ ಹಾಫ್ ಹೆಲ್ಮೆಟ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಂಗಡಿಗಳ ಮೇಲೆ ದಾಳಿ ನಡೆಸಿ ಹಾಫ್ ಹೆಲ್ಮೆಟ್ಗಳನ್ನು ಸೀಜ್ ಮಾಡಿದ್ದರು. ಹಾಗಾಗಿ ಐಎಸ್ಐ ಗುರುತು ಇರುವು ಫುಲ್ ಹೆಲ್ಮೆಟ್ಗೆ ನಗರದಲ್ಲಿ ಭಾರಿ ಡಿಮಾಂಡ್ ಬಂದಿತ್ತು.