ಶಿವಮೊಗ್ಗ ಲೈವ್.ಕಾಂ | SHIMOGA | 3 ಏಪ್ರಿಲ್ 2020
ಲಾಕ್ ಡೌನ್ ಮತ್ತು ನಿಷೇಧಾಜ್ಞೆ ಆದೇಶ ಉಲ್ಲಂಘನೆ ಮಾಡಿ ಅಂದರ್ ಬಾಹರ್ ಇಸ್ಪಿಟು ಜೂಜಾಟ ಆಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ನಗದು, ಮೊಬೈಲ್’ಗಳನ್ನು ವಶಕ್ಕೆ ಪಡೆಯಲಾಗಿದೆ.
ಗಾಜನೂರು ಗ್ರಾಮದ ರುದ್ರಭೂಮಿ ಬಳಿ ಅಂದರ್ ಬಾಹರ್ ಇಸ್ಪೀಟು ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ತುಂಗಾನಗರ ಠಾಣೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ, ಗಾಜನೂರಿನ ಮಂಜುನಾಥ (50), ಚಂದ್ರು (32), ಮಹೇಶ್ (50) ಮಹೇಶ್ (45) ಮತ್ತು ಲಕ್ಷ್ಮೀಪುರದ ಜಯಕುಮರ್ (30) ಎಂಬುವವರನ್ನು ಬಂಧಿಸಲಾಗಿದೆ.
ಇವರಿಂದ 5,590 ರೂ. ನಗದು ಮತ್ತು ನಾಲ್ಕು ಮೊಬೈಲ್ ಫೋನ್’ಗಳನ್ನು ವಶಕ್ಕೆ ಪಡೆಯಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]