SHIVAMOGGA LIVE NEWS | 30 OCTOBER 2023
SHIMOGA : ಈವರೆಗು ಕರ್ಕಶ ಶಬ್ದ ಮಾಡುವ ದೋಷಪೂರಿತ ಸೈಲೆನ್ಸರ್ (Silencer) ಹೊಂದಿದ್ದ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸುತ್ತಿದ್ದರು. ಈಗ ದೋಷಪೂರಿತ ಸೈಲೆನ್ಸರ್ ಅಳವಡಿಸುತ್ತಿದ್ದವರ ಮೇಲೆಯೇ ದಾಳಿ ನಡೆಸಿದ್ದಾರೆ. ಸೈಲೆನ್ಸರ್ಗಳನ್ನು ವಶಕ್ಕೆ ಪಡೆದು ವಾರ್ನಿಂಗ್ ನೀಡಿದ್ದಾರೆ.
ಗಾರ್ಡನ್ ಏರಿಯಾದ ವೆಲ್ಡಿಂಗ್ ಅಂಗಡಿಗಳು ಸೇರಿದಂತೆ ವಿವಿಧೆಡೆ ಸಂಚಾರ ಠಾಣೆ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ದೋಷಪೂರಿತ ಸೈಲೆನ್ಸರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಇಂತಹ ಸೈಲೆನ್ಸರ್ಗಳನ್ನು ದ್ವಿಚಕ್ರ ವಾಹನಗಳಿಗೆ ಅಳವಡಿಸಿದರೆ ಮೋಟರ್ ವಾಹನ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಡಿವೈಎಸ್ಪಿ ಸುರೇಶ್.ಎಂ ಮತ್ತು ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಾನಿಟಿ ಬ್ಯಾಗ್ನಿಂದ ಚಿನ್ನಾಭರಣ ಕಳ್ಳತನ ಕೇಸ್, ಕುಖ್ಯಾತ ಕಳ್ಳಿ ಬಂಧನ