ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 AUGUST 2023
BHADRAVATHI : ಕುಡಿಯಲು ನೀರು (Drinking Water) ಕೇಳಿ ಮನೆಯೊಳಗೆ ನುಗ್ಗಿ ರಾಬರಿ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. 2015ರಲ್ಲಿ ಭದ್ರಾವತಿಯ ಜನ್ನಾಪುರದಲ್ಲಿ ಘಟನೆ ಸಂಭವಿಸಿತ್ತು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಜನ್ನಾಪುರದ ನಿವಾಸಿ 60 ವರ್ಷದ ಮಹಿಳೆಯೊಬ್ಬರ ಮನೆ ಬಳಿ ಬಂದ ಸಂಕ್ಲೀಪುರದ ಕುಮಾರ ಎಂಬಾತ ಕುಡಿಯಲು ನೀರು ಕೇಳಿದ್ದ. ಮಹಿಳೆ ಒಳಗೆ ಹೋಗುತ್ತಿದ್ದಂತೆ ಒಳ ನುಗ್ಗಿದ ಕುಮಾರ, ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕೆಳಗೆ ಬೀಳಿಸಿ ತಲೆ ದಿಂಬಿನಿಂದ ಮುಖಕ್ಕೆ ಒತ್ತಿ, ಹೊಡೆದಿದ್ದ. ಮಾಂಗಲ್ಯ ಸರ, ಹಣ ಮತ್ತು ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಹೋಗಿದ್ದ. ಘಟನೆ ಸಂಬಂಧ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಶಿವಮೊಗ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಮೇಲೆ ಕಂಡಕ್ಟರ್‌ನಿಂದ ಹಲ್ಲೆ, ಕಾರಣವೇನು?
ಇನ್ಸ್‌ಪೆಕ್ಟರ್ ಪ್ರಭು ಸುರಿನ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಭದ್ರಾವತಿ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಧೀಶರಾದ ಮಹಮ್ಮದ್ ಅಲಿ ನಾಯಕ್ ಅವರು ವಿಚಾರಣೆ ನಡೆಸಿದರು. ಆರೋಪ ಸಾಬೀತಾದ ಹಿನ್ನೆಲೆ ಸಂಕ್ಲೀಪುರದ ಕುಮಾರ್‌ಗೆ ಶಿಕ್ಷೆ ಪ್ರಕಟಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಗಾಂಜಾ ಸೇವಿಸಿದ್ದ ಬ್ಯಾಂಕ್ ಉದ್ಯೋಗಿ ಭದ್ರಾವತಿಯಲ್ಲಿ ಅರೆಸ್ಟ್ – 3 ಫಟಾಫಟ್ ಕ್ರೈಮ್ ನ್ಯೂಸ್
ಕುಮಾರ್‌ಗೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲನಾದರೆ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ. ಸರ್ಕಾರದ ಪರವಾಗಿ ನೀಲಜ್ಯೋತಿ ವಾದಿಸಿದ್ದರು.