ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019
ವಾಹನಗಳನ್ನು ಅಡ್ಡಗಟ್ಟಿ ಆಯುಧ ತೋರಿಸಿ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದ ರೌಡಿಯೊಬ್ಬನನ್ನು ಗಡಿಪಾರು ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗುರುಪುರದ ಸುನಿಲ್ ಅಲಿಯಾಸ್ ಬೆಕ್ಕು (25) ಎಂಬಾತನನ್ನು ಗಡಿಪಾರು ಮಾಡಲಾಗಿದೆ. ಈತನ ವಿರುದ್ಧ ಇದ್ದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ.
ಏನೆಲ್ಲ ಆರೋಪಗಳಿವೆ?
ಸುನಿಲ್ ಅಲಿಯಾಸ್ ಬೆಕ್ಕು ವಿರುದ್ಧ ಕೊಲೆ, ಕೊಲೆ ಬೆದರಿಕೆ, ಗುಂಪು ಕಟ್ಟಿಕೊಂಡು ಹೊಡೆದಾಡುವುದು ಸೇರಿದಂತೆ ಹಲವು ಆರೋಪಗಳಿವೆ. ಈತನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಮತ್ತು ವಿನೋಬನಗರ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ.

ಜಾಮೀನು ಮೇಲೆ ಬಂದು ಮತ್ತದೆ ಕೃತ್ಯ
ಸುನಿಲ್ ಹಲವು ಬಾರಿ ಬಂಧನಕ್ಕೊಳಗಾಗಿದ್ದಾನೆ. ಬಳಿಕ ಜಾಮೀನು ಮೇಲೆ ಹೊರಬಂದು ರೌಡಿ ಚಟುವಟಿಕೆ ಮುಂದುವರೆಸಿದ್ದಾನೆ. ಈ ಹಿನ್ನೆಲಯಲ್ಲಿ ಈತನನ್ನು ಗಡಿಪಾರು ಮಾಡಬೇಕು ಎಂದು ಪೊಲೀಸರು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಶಿವಮೊಗ್ಗ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಗುರುಪುರದ ಸುನಿಲ್ ಅಲಿಯಾಸ್ ಬೆಕ್ಕುನನ್ನು ಒಂದು ವರ್ಷ ಗಡಿಪಾರು ಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]