SHIVAMOGGA LIVE NEWS | 7 ಏಪ್ರಿಲ್ 2022
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಒಂದರ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ನಾಲ್ವರು ಕಳ್ಳರು, 22 ಬೈಕುಗಳು ಸಿಕ್ಕಿವೆ.
ಹಲವು ಜಿಲ್ಲೆಗಳಲ್ಲಿ ಬೈಕ್ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಾಗರ ಪೊಲೀಸರು ಬಂಧಿಸಿ 22 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾವೇರಿಯ ಸುದೀಪ್ ಅಲಿಯಾಸ್ ಚೂಪಾ, ಅಜಯ್ ಅಲಿಯಾಸ್ ಅಜ್ಜಪ್ಪ, ಗಂಗಾಧರ್ ಅಲಿಯಾಸ್ ಸಂಜು ಅಲಿಯಾಸ್ ಡಿಜೆ ಅಲಿಯಾಸ್ ಗಂಗಾ ಬಂಧಿತರು.
ಒಂದು ಬೈಕ್ ಕಳವು ಕೇಸ್
ಸಾಗರ ನೆಹರೂ ನಗರದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸಿದಾಗ ಬೈಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಬೈಕ್ಗಳನ್ನು ಖರೀದಿ ಮಾಡಿದ್ದ ಹಾವೇರಿಯ ಶಿವಬಸವ ನಗರದ ಗುರುರಾಜ್ ಎಂಬುವವರನ್ನು ವಶಕ್ಕೆ ಪಡೆದು 8 ಬುಲೆಟ್, 1 ಕೆಟಿಎಂ, 1 ಡ್ಯೂಕ್, 1 ಬಜಾಜ್ ಪಲ್ಸರ್ ಎನ್ಎಸ್, 9 ಸ್ಪ್ಲೆಂಡರ್ ಪ್ಲಸ್ ಬೈಕ್, 1 ಯಮಹಾ, 1 ಸ್ಪ್ಲೆಂಡರ್ ಪ್ರೊ ಸೇರಿದಂತೆ 22 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ 30 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ.
ಆರೋಪಿಗಳು ಸಾಗರ, ಹೊಸನಗರ, ತೀರ್ಥಹಳ್ಳಿ, ಆನವಟ್ಟಿ, ಸೊರಬ, ಶಿರಾಳಕೊಪ್ಪ, ಹಾವೇರಿ, ಕೊಪ್ಪಳ, ಬಳ್ಳಾರಿ ಸೇರಿದಂತೆ ವಿವಿಧೆಡೆ ಬೈಕುಗಳ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಬೈಕ್ ಕಳವು ಪ್ರಕರಣಗಳ ದೂರಿನ ಹಿನ್ನೆಲೆಯಲ್ಲಿ ಕಳ್ಳರ ಪತ್ತೆಗೆ ಸಾಗರ ಎಎಸ್ಪಿ ಡಾ. ರೋಹನ್ ಜಗದೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಸಾಗರ-ಕಾರ್ಗಲ್ ಸರ್ಕಲ್ ಇನ್ಸ್ ಪೆಕ್ಟರ್ ಕೆ.ವಿ.ಕೃಷ್ಣಪ್ಪ, ಕಾರ್ಗಲ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜಿ.ತಿರುಮಲೇಶ್, ಸಾಗರ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ತುಕಾರಾಮ್ ಡಿ.ಸಾಗರ್ಕರ್ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ರತ್ನಾಕರ್, ಸಂತೋಷ್ ನಾಯ್ಕ, ಹಜರತ್ ಅಲಿ, ಅಶೋಕ್, ಶ್ರೀಧರ್, ರವಿಕುಮಾರ್, ಮಲ್ಲೇಶ್ ಹೊಸಕೋಟೆ, ಸೈನುಸಾಬ್, ಹನೀಫ್, ಚಂದ್ರಶೇಖರ್ ಗೌಡ, ಶಮಂತ್, ಶಿವಮೊಗ್ಗ ಎಎನ್ಸಿ ವಿಭಾಗದ ಸಿಬ್ಬಂದಿ ಇಂದ್ರೇಶ್, ವಿಜಯಕುಮಾರ್, ಗುರುರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200