SHIVAMOGGA LIVE NEWS | 22 JANUARY 2023
SHIMOGA | ಎಸ್ಎಂಎಸ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ಶಿವಮೊಗ್ಗ ಜಿಲ್ಲೆಯ ನೌಕರರೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 1.73 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಎಸ್.ಬಿ.ಐ ಬ್ಯಾಂಕ್ (SBI YONO) ಹೆಸರನ್ನು ದುರ್ಬಳಕೆ ಮಾಡಿಕೊಂಡು, ವಂಚನೆ ಮಾಡಲಾಗಿದೆ.
ಪ್ಯಾನ್ ಕಾರ್ಡ್ ಅಪ್ ಡೇಟ್
ಶಿವಮೊಗ್ಗ ಜಿಲ್ಲೆಯ ನೌಕರರೊಬ್ಬರ (ಹೆಸರು ಗೌಪ್ಯ) ಮೊಬೈಲ್ ಗೆ ಅಪರಿಚಿತ ಮೊಬೈಲ್ ನಂಬರಿನಿಂದ ಮೆಸೇಜ್ ಬಂದಿತ್ತು. Dear SBI User Your SBI YONO Account will be blocked today please Update your Pan Card immediately click here ಎಂದು ಲಿಂಕ್ ಕಳುಹಿಸಲಾಗಿತ್ತು. ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗ ಜಿಲ್ಲೆಯ ನೌಕರ ಪ್ಯಾನ್ ಕಾರ್ಡ್ ನಂಬರ್ ಅಪ್ ಡೇಟ್ ಮಾಡಿದ್ದಾರೆ. ಕೆಲವೆ ಹೊತ್ತಿನಲ್ಲಿ ಮೂರು ಒಟಿಪಿ ಬಂದಿದ್ದು, ಆಟೋ ಫಿಲ್ ಆಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಬ್ಯಾಂಕಿಗೆ ಹೋದಾಗ ಶಾಕ್
ಶಿವಮೊಗ್ಗ ಜಿಲ್ಲೆಯ ನೌಕರನ ಖಾತೆಗೆ ವೈದ್ಯಕೀಯ ಮರು ಪಾವತಿ ಹಣ 2.18 ಲಕ್ಷ ರೂ. ಬಂದಿತ್ತು. ಅದೆ ದಿನ ಪ್ಯಾನ್ ಕಾರ್ಡ್ ಅಪ್ ಡೇಟ್ ಲಿಂಕ್ ಬಂದಿತ್ತು. ಅಪ್ ಡೇಟ್ ಮಾಡಿದ ಮರುದಿನ ನೌಕರ ಬ್ಯಾಂಕಿಗೆ ತೆರಳಿದ್ದು, ಚೆಕ್ ನೀಡಿ ಹಾ ಡ್ರಾ ಮಾಡಲು ಮುಂದಾಗಿದ್ದಾರೆ. ಆಗ ಬ್ಯಾಂಕ್ ಸಿಬ್ಬಂದಿ ತಮ್ಮ ಖ್ಯಾತೆಯಿಂದ ಮೂರ ಭಾರಿ ಹಣ ವರ್ಗಾವಣೆ ಆಗಿರುವುದನ್ನು ತಿಳಿಸಿದ್ದಾರೆ. 1.73 ಲಕ್ಷ ರೂ. ಹಣ ವರ್ಗಾವಣೆಯಾಗಿತ್ತು.
ಇದನ್ನೂ ಓದಿ – ‘ಕಸ್ಟಮರ್ ಕೇರ್’ಗೆ ಕರೆ ಮಾಡಿದ್ಮೇಲೆ ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಬರೀ 2 ರೂ..!
ಅನುಮಾನಾಸ್ಪದ ಲಿಂಕ್ ಬಗ್ಗೆ ಎಚ್ಚರ
ಜಗತ್ತಿನಾದ್ಯಂತ ಆನ್ ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ. ಅನುಮಾನಾಸ್ಪದ, ಅಪರಿಚಿತ ಮೊಬೈಲ್ ನಂಬರ್ ಗಳಿಂದ ಬರುವ ಯಾವುದೆ ಲಿಂಕುಗಳನ್ನು ಕ್ಲಿಕ್ ಮಾಡುವುದು ಅಪಾಯಕ್ಕೆ ಎಡೆಮಾಡಿಕೊಟ್ಟಂತೆ. ಪ್ಯಾನ್ ಕಾರ್ಡ್ ಅಪ್ ಡೇಟ್ ಮಾಡಿ, ನಿಮ್ಮ ಎಟಿಎಂ ರಿನಿವಲ್ ಮಾಡಿ, ಹೊಸ ವರ್ಷದ ಆಫರ್, ಸಂಕ್ರಾಂತಿ ಸ್ಪೆಷಲ್, ಗಣರಾತ್ಯೋತ್ಸವದ ಧಮಾಕದ ಹೆಸರಿನಲ್ಲಿಯು ಲಿಂಕುಗಳು ಬರುತ್ತವೆ. ಯಾವುದೆ ಲಿಂಕುಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಹಣ ಕಳೆದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ – ಸಂಸದ ರಾಘವೇಂದ್ರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 16 ಲಕ್ಷ ರೂ. ಲಪಟಾಯಿಸಿದ್ದ ಮುಂಬೈ ಹ್ಯಾಕರ್
ಹೆಚ್ಚಿನ ಮಾಹಿತಿಗೆ ಸರ್ಕಾರದ https://cybercrime.gov.in/ ವೆಬ್ ಸೈಟ್ ಪರಿಶೀಲಿಸಿ. ಸೈಬರ್ ವಂಚಕರ ಬಲೆಗೆ ಬಿದ್ದಿರುವ ಅನುಮಾನ ವ್ಯಕ್ತವಾಗಿದರೆ, ತಕ್ಷಣವೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಕಟ್ಟಡದಲ್ಲಿಯೆ ಇರುವ ಸೈಬರ್ ಕ್ರೈಮ್ ಸಿಇಎನ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ದೂರು ದಾಖಲಿಸಿ.
ಇದನ್ನೂ ಓದಿ – ಶಿವಮೊಗ್ಗ ನಿಲ್ದಾಣದಲ್ಲಿ ನೀರಿನ ಬಾಟಲಿ ಕೊಂಡು ಬಸ್ ಹತ್ತಿದ ವಿದ್ಯಾರ್ಥಿನಿಗೆ ಕಾದಿತ್ತು ಆಘಾತ