ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಆನ್ಲೈನ್ ಟ್ರೇಡಿಂಗ್ನಲ್ಲಿ ಅತಿ ಹೆಚ್ಚು ಲಾಭ ಮಾಡಿಕೊಡುವುದಾಗಿ ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 9.64 ಲಕ್ಷ ರೂ. ವಂಚಿಸಲಾಗಿದೆ. ಶಿವಮೊಗ್ಗದ ವ್ಯಕ್ತಿ (ಹೆಸರು ಗೌಪ್ಯ) ಷೇರ್ ಖಾನ್ ಮೊಬೈಲ್ ಆಪ್ ಮೂಲಕ ಟ್ರೇಡಿಂಗ್ ಮಾಡುತ್ತಿದ್ದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಜ.16ರಂದು ಬೆಂಗಳೂರಿನಿಂದ ಕರೆ ಮಾಡಿದ್ದ ಮಂಜುನಾಥ್ ಎಂಬಾತ ಟ್ರೇಡಿಂಗ್ನಲ್ಲಿ ಹೆಚ್ಚು ಲಾಭ ಮಾಡಿಕೊಡುವುದಾಗಿ ನಂಬಿಸಿದ್ದ. ಇದಕ್ಕೆ ಶೇ.50ರಷ್ಟು ಕಮಿಷನ್ ಕೊಡಬೇಕು ಎಂದು ತಿಳಿಸಿದ್ದ. ಶಿವಮೊಗ್ಗದ ವ್ಯಕ್ತಿಯಿಂದ ಷೇರ್ ಖಾನ್ ಆಪ್ನ ಲಾಗಿನ್, ಪಾಸ್ವರ್ಡ್ ಪಡೆದಿದ್ದ. ಆದರೆ ಅನುಮತಿ ಇಲ್ಲದೆ ಮಂಜುನಾಥ, ಡಿಮ್ಯಾಟ್ ಅಕೌಂಟ್ನಲ್ಲಿದ್ದ 5 ಲಕ್ಷ ರೂ.ಗಳನ್ನು ಷೇರುಗಳ ಮೇಲೆ ಹೂಡಿಕೆ ಮಾಡಿ ನಷ್ಟ ಉಂಟು ಮಾಡಿದ್ದ. ಅಲ್ಲದೆ, ಈ ಹಿಂದೆ ಖರೀದಿಸಿದ್ದ ಷೇರುಗಳನ್ನು ಮಾರಾಟ ಮಾಡಿದ್ದ.
ಇದನ್ನೂ ಓದಿ – ಕೋಟೆ ಮಾರಿಕಾಂಬ ಜಾತ್ರೆ, ‘ಸಾರು ಹಾಕುವ ಪದ್ಧತಿ’ಗೆ ಚಾಲನೆ, ವಿದೇಶಿಗರನ್ನು ಸೆಳೆದ ಆಚರಣೆ
ನಷ್ಟದಿಂದ ಕಂಗಾಲಾಗಿದ್ದ ಶಿವಮೊಗ್ಗದ ವ್ಯಕ್ತಿ, ತಮ್ಮ ಅನುಮತಿ ಇಲ್ಲದೆ ತಮ್ಮ ಖಾತೆಯಿಂದ ವ್ಯವಹಾರ ನಡೆಸದಂತೆ ಸೂಚಿಸಿದ್ದರು. ಹಾಗಿದ್ದೂ 7 ಲಕ್ಷ ರೂ.ಗೂ ಹೆಚ್ಚು ಹಣವನ್ನು ಬೆಂಗಳೂರಿನ ಮಂಜುನಾಥ ಹೂಡಿಕೆ ಮಾಡಿ ನಷ್ಟ ಉಂಟು ಮಾಡಿದ್ದ. ಟ್ರೇಡಿಂಗ್ನಲ್ಲಿ ಅಧಿಕ ಲಾಭ ಮಾಡಿಕೊಡುವುದಾಗಿ ನಂಬಿಸಿ ಶಿವಮೊಗ್ಗದ ವ್ಯಕ್ತಿಯ ಖಾತೆಯಿಂದ ಅನುಮತಿ ಇಲ್ಲದೆ ಹಣ ಹೂಡಿಕೆ ಮಾಡಿ 9.64 ಲಕ್ಷ ರೂ. ನಷ್ಟು ಉಂಟು ಮಾಡಿದ್ದಾನೆ ಎಂದು ಆರೋಪಿಸಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.