ಶಿವಮೊಗ್ಗ ಲೈವ್.ಕಾಂ | SHIMOGA | 5 ಅಕ್ಟೋಬರ್ 2019
ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದ್ದ ‘ಪಲ್ಸರ್ ಗ್ಯಾಂಗ್’ ಶಿವಮೊಗ್ಗಕ್ಕು ಕಾಲಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಸಾಲು ಸಾಲು ಸರಗಳ್ಳತನವಾಗುತ್ತಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಎರಡು ದಿನದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಎಲ್ಲೆಲ್ಲಿ ಸರಗಳ್ಳತನವಾಗಿದೆ?
ದಿನಾಂಕ : 4 ಅಕ್ಟೋಬರ್ 2019
ಸ್ಥಳ : ಭದ್ರಾವತಿ
ಬಾರಂದೂರು ಹಳ್ಳಿಕೆರೆ ರಸ್ತೆಯಲ್ಲಿ ನಿಂತಿದ್ದ ಅನುಸೂಯಮ್ಮ ಎಂಬುವವರ ಕೊರಳಲ್ಲಿದ್ದ ಸರವನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಬೈಕ್’ನಲ್ಲಿ ಬಂದಿದ್ದ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭದ್ರಾವತಿ ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ : 4 ಅಕ್ಟೋಬರ್ 2019
ಸ್ಥಳ : ಶಿವಮೊಗ್ಗ
ಶಿವಮೊಗ್ಗದ ಎಪಿಎಂಸಿಯಿಂದ ತರಕಾರಿ ಖರೀದಿಸಿ ಹಿಂತಿರುಗುತ್ತಿದ್ದ ಪಾರ್ವತಮ್ಮ ಎಂಬುವವರ 38 ಗ್ರಾಂ ಸರವನ್ನು ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದಾರೆ. ಬೈಕ್’ನಲ್ಲಿ ಬಂದವರು ದುಷ್ಕೃತ್ಯ ಎಸಗಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ : 5 ಅಕ್ಟೋಬರ್ 2019
ಸ್ಥಳ : ಗಾಂಧಿನಗರ ಪಾರ್ಕ್ ಬಳಿ, ಶಿವಮೊಗ್ಗ
ಶಿವಮೊಗ್ಗದ ಗಾಂಧಿ ನಗರ ಪಾರ್ಕ್ ಬಳಿ ಹೋಗುತ್ತಿದ್ದ ಗೌರಮ್ಮ ಎಂಬುವವರ ಮಾಂಗಲ್ಯ ಸರ ಮತ್ತು ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. 40 ಗ್ರಾಂ ಮಾಂಗಲ್ಯ ಸರ ಮತ್ತು 10 ಗ್ರಾಂ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಸರಾ ಹಬ್ಬದ ಸಂದರ್ಭ ಶಿವಮೊಗ್ಗದಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗಿರುವುದು ಪೊಲೀಸರಿಗೆ ತಲೆನೋವಾಗಿದೆ. ಹೊರಗಿನಿಂದ ಬಂದ ಗ್ಯಾಂಗ್ ಸರಣಿ ಸರಗಳ್ಳತನ ನಡೆಸುತ್ತಿರುವ ಶಂಕೆ ಇದೆ. ಹಳದಿ ಮತ್ತು ಬಿಳಿ ಬಣ್ಣದ ಪಲ್ಸರ್ ಬೈಕ್’ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200