ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 9 AUGUST 2023
SHIMOGA : ನೆಹರೂ ರಸ್ತೆಯಲ್ಲಿ ಅಂಗಡಿಗಳ ಸರಣಿ ಕಳ್ಳತನವಾಗಿದ್ದು (SERIAL THEFT), ದುಬಾರಿ ಬೆಲೆಯ ಬ್ರಾಂಡೆಡ್ ಶೂ, ಚಪ್ಪಲಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಹರು ರಸ್ತೆಯಲ್ಲಿರುವ ಬ್ಲಾಕ್ ಶೂ ಅಂಗಡಿಯಲ್ಲಿ ಕಳ್ಳತನವಾಗಿದೆ (SERIAL THEFT). ಎಂದಿನಂತೆ ರಾತ್ರಿ 10 ಗಂಟೆಗೆ ಅಂಗಡಿ ಬಂದ್ ಮಾಡಿ ತೆರಳಿದ್ದರು. ಮರುದಿನ ಬೆಳಗ್ಗೆ ಬಂದು ಬಾಗಿಲು ತೆಗೆದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಾತ್ ರೂಂನ ಗ್ರಿಲ್ ಕಟ್ ಮಾಡಿ ಕಳ್ಳರು ಒಳ ನುಗ್ಗಿದ್ದಾರೆ. ಪೂಮಾ ಕಂಪನಿಯ 9 ಸಾವಿರ ರೂ. ಮೌಲ್ಯದ ಶೂ, ಸ್ಪಾರ್ಕ್ಸ್ ಕಂಪನಿಯ 1400 ರೂ. ಬೆಲೆಯ ಶೂ, ಪೂಮಾ ಕಂಪನಿಯ 3300 ರೂ. ಮೊತ್ತದ ಚಪ್ಪಲಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಅಲ್ಲದೆ ಡ್ರಾದಲ್ಲಿದ್ದ 200 ರೂ. ನಗದು ಕಾಣೆಯಾಗಿದೆ.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂದೆ ಕಿರಿಕ್, ಆಟೋ ಚಾಲಕನ ಮೂಗು, ಕಣ್ಣಿಗೆ ಪಂಚ್, ಕಿತ್ತಾಟಕ್ಕೆ ಕಾರಣವೇನು?
ಬ್ಲಾಕ್ ಶೂ ಅಂಗಡಿ ಪಕ್ಕದ ಬಂಡಿಗಡಿ ಟ್ರೇಡರ್ಸ್ ಪೇಂಟ್ ಅಂಗಡಿಯಲ್ಲಿ 4 ಸಾವಿರ ರೂ. ನಗದು, ಸುಭಾಷಿತ್ ಬಟ್ಟೆ ಅಂಗಡಿಗು ಕಳ್ಳರು ನುಗ್ಗಿದ್ದಾರೆ. ಬಟ್ಟೆ ಚಲ್ಲಾಪಿಲ್ಲಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
.jpeg)






