ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020
ಶಿವಮೊಗ್ಗದ ಮಹಾವೀರ ಸರ್ಕಲ್’ನಲ್ಲಿ ಇವತ್ತು ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದ ಸಿಸಿಟಿವಿ ವಿಡಿಯೊ ಲಭ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಸವಾರರು ಗಾಳಿಯಲ್ಲಿ ಹಾರಿ ರಸ್ತೆಗೆ ಬೀಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ATNC ಕಾಲೇಜು ಕಡೆಯಿಂದ ವೇಗವಾಗಿ ಬಂದ ಕಾರು ಮತ್ತು ರೈಲ್ವೆ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಕಾರು ಮತ್ತು ಬೈಕು ಒಟ್ಟಿಗೆ ಸರ್ಕಲ್ ಮಧ್ಯಕ್ಕೆ ಬಂದಿವೆ. ಅಲ್ಲದೆ ವೇಗವಾಗಿದ್ದಿದ್ದು ಕೂಡ ಅಪಘಾತಕ್ಕೆ ಕಾರಣವಾಗಿದೆ.
ನಗರದ ಅತ್ಯಂತ ಡೇಂಜರ್ ಸರ್ಕಲ್
ಶಿವಮೊಗ್ಗ ನಗರದ ಪಾಲಿಗೆ ಮಹಾವೀರ ಸರ್ಕಲ್ ಅತ್ಯಂತ ಡೇಂಜರ್ ಸ್ಪಾಟ್ ಆಗಿದೆ. ಅತಿ ಹೆಚ್ಚು ಅಪಘಾತಗಳಿಗೆ ಈ ವೃತ್ತ ಸಾಕ್ಷಿಯಾಗಿದೆ. ಇಲ್ಲಿನ ಬಹುತೇಕ ಅಪಘಾತಗಳು ರಾತ್ರಿ ಅಥವಾ ಬೆಳಗಿನ ಜಾವವೇ ಸಂಭವಿಸಿವೆ.
ಸವಳಂಗ ರಸ್ತೆ ಅಗಲೀಕರಣಗೊಂಡು, ಮಹಾವೀರ ಸರ್ಕಲ್’ಗೆ ಡಿಜಿಟಲ್ ಸಿಗ್ನಲ್ ಅಳವಡಿಸಲಾಯಿತು. ಕೆಲವೇ ದಿನದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ, ಸಿಗ್ನಲ್ ಕಂಬಕ್ಕೆ ಗುದ್ದಿ, ಗಾಂಧಿ ಪಾರ್ಕ್’ಗೆ ನುಗ್ಗಿತ್ತು. ಇದಾದ ಬಳಿಕ ಈ ಸರ್ಕಲ್’ನಲ್ಲಿ ಹಲವು ಅಪಘಾತ ಸಂಭವಿಸಿದೆ.
ಹೈ ಮಾಸ್ಕ್ ಲೈಟಿದೆ, ಸಿಗ್ನಲ್ ಇದೆ, ಆದರೂ..
‘ಬೆಳಗ್ಗೆ ಟ್ರಾಫಿಕ್ ಸಿಗ್ನಲ್ ಇರುತ್ತೆ ಮತ್ತು ಸರ್ಕಲ್’ನಲ್ಲಿ ಸದಾ ಪೊಲೀಸರು ಇರುತ್ತಾರೆ. ಹಾಗಾಗಿ ವಾಹನಗಳ ಸ್ಪೀಡ್ ಕಡಿಮೆ ಇರುತ್ತೆ. ರಾತ್ರಿಯಲ್ಲಿ ವಾಹನಗಳು ಕಡಿಮೆ. ಆದರೆ ಎಲ್ಲರು ಸ್ಪೀಡಾಗಿ ಬರುತ್ತಾರೆ. ಇದೇ ಅಪಘಾತಕ್ಕೆ ಕಾರಣ’ ಅಂತಾರೆ ಆಟೋ ಚಾಲಕ ರಂಗನಾಥ.
ಮಹಾವೀರ ಸರ್ಕಲ್’ನಲ್ಲಿ ಬಾಲರಾಜ ಅರಸ್ ರಸ್ತೆ ಮತ್ತು ಸವಳಂಗ ರಸ್ತೆ ಸೇರುತ್ತವೆ. ಇವೆರಡು ರಸ್ತೆಯಲ್ಲಿ 24 ಗಂಟೆಯು ವಾಹನ ಸಂಚಾರವಿರುತ್ತದೆ. ರಾತ್ರಿ ವೇಳೆ ವಾಹನಗಳು ವಿರಳ. ಅದರೆ ಸರ್ಕಲ್ ಸಮೀಪದಲ್ಲಿ ವಾಹನಗಳ ವೇಗ ತಗ್ಗವುದಿಲ್ಲ. ಇದೇ ಬಹುತೇಕ ಅಪಘಾತಗಳಿಗೆ ಕಾರಣ ಅನ್ನುತ್ತಾರೆ ಸಂಚಾರಿ ಪೊಲೀಸರು. ಈ ಸರ್ಕಲ್’ನಲ್ಲಿ ಹೈ ಮಾಸ್ಕ್ ಲೈಟ್’ಗಳಿವೆ, ಪ್ರತಿ ರಾತ್ರಿಯು ರೆಡ್ ಸಿಗ್ನಲ್ ಲೈಟ್ ಬ್ಲಿಂಕ್ ಆಗುತ್ತಲೆ ಇರುತ್ತದೆ. ಆದರು ಚಾಲಕರು ಮುಂಜಾಗ್ರತೆ ವಹಿಸುತ್ತಿಲ್ಲ. ಶುಕ್ರವಾರ ಬೆಳಗ್ಗೆ ಸಂಭವಿಸಿದ ಅಪಘಾತಕ್ಕೂ ಇದೇ ಕಾರಣವಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Mahaveera Circle in Shimoga has become the accident zone. Most of the Accidents here have occurred during night or the early morning.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422