ಶಿವಮೊಗ್ಗ LIVE
ಶಿವಮೊಗ್ಗ: ಗಾಂಜಾ ದಂಧೆಕೋರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಪೊಲೀಸರು, ಶಿವಮೊಗ್ಗಕ್ಕೆ ಗಾಂಜಾ ಸಪ್ಲೈ ಮಾಡುತಿದ್ದ ವ್ಯಕಿಯೊಬ್ಬನ ಹೆಡೆಮುರಿ (Arrested) ಕಟ್ಟಿದ್ದಾರೆ. ಆತನಿಂದ ಕೆ.ಜಿ.ಗಟ್ಟಲೆ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಸಾಗರ ಮೂಲದ ಅಲ್ತಾಫ್ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ 4 ಕೆ.ಜಿ 30 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಇನ್ಸ್ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹಳೆ ಮಂಡ್ಲಿ ಸಮೀಪದ ನಮೋ ಶಂಕರ ಲೇಔಟ್ ಬಳಿ ಅಲ್ತಾಫ್ನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಆತನನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಬಾಬು ಅಂಜನಪ್ಪ, ಇನ್ಸ್ಪೆಕ್ಟರ್ ರವಿ ಪಾಟೀಲ್, ಸಬ್ ಇನ್ಸ್ಪೆಕ್ಟರ್ ನಾರಾಯಣ್ ಮಧುಗಿರಿ, ಸಿಬ್ಬಂದಿ ಸಂದೀಪ್, ಗುರುನಾಯ್ಕ್, ಗಣೇಶ್, ಪುನೀತ್, ಮನೋಹರ್, ಹಾಗು ಜಿಲ್ಲಾ ಸಿಡಿಆರ್ ವಿಭಾಗದ ಇಂದ್ರೇಶ್, ಗುರು ಪಾಲ್ಗೊಂಡಿದ್ದರು. ದೊಡ್ಡ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿರುವ ಸಿಬ್ಬಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





