Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • 50 WORDS NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಶಿವಮೊಗ್ಗ ಟ್ರಾಫಿಕ್‌ ಪೊಲೀಸರಿಂದ ದಿಢೀರ್‌ ಕಾರ್ಯಾಚರಣೆ, ರಾಶಿ ರಾಶಿ ಹಾಫ್‌ ಹೆಲ್ಮೆಟ್‌ ವಶಕ್ಕೆ, ವಿಡಿಯೋಗಳು ವೈರಲ್

ಶಿವಮೊಗ್ಗ ಟ್ರಾಫಿಕ್‌ ಪೊಲೀಸರಿಂದ ದಿಢೀರ್‌ ಕಾರ್ಯಾಚರಣೆ, ರಾಶಿ ರಾಶಿ ಹಾಫ್‌ ಹೆಲ್ಮೆಟ್‌ ವಶಕ್ಕೆ, ವಿಡಿಯೋಗಳು ವೈರಲ್

25/07/2023 5:50 PM
ನಿತಿನ್‌ ಕೈದೊಟ್ಲು

SHIVAMOGGA LIVE | 25 JULY 2023

SHIMOGA : ಹಾಫ್‌ ಹೆಲ್ಮೆಟ್‌ (Half Helmet) ಧರಿಸಿ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಶಿವಮೊಗ್ಗ ಸಂಚಾರ ಠಾಣೆ ಪೊಲೀಸರು ಶಾಕ್‌ ನೀಡಿದ್ದಾರೆ. ನಗರದ ವಿವಿಧೆಡೆ ದಿಢೀರ್‌ ಕಾರ್ಯಾಚರಣೆ ನಡೆಸಿ ಹಾಫ್‌ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ರಾಶಿ ರಾಶಿ ಹಾಫ್‌ ಹೆಲ್ಮೆಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

 

ಇವತ್ತಿನ ನ್ಯೂಸ್‌
» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

Action-About-half-helmets-in-Shivamogga

ದಿಢೀರ್‌ ಕಾರ್ಯಾಚರಣೆ

ನಗರದ ವಿವಿಧೆಡೆ ಸಂಚಾರ ಠಾಣೆ ಪೊಲೀಸರು ದಿಢೀರ್‌ ಕಾರ್ಯಾಚರಣೆ ನಡೆಸಿದರು. ಹಾಫ್‌ ಹೆಲ್ಮೆಟ್‌ (Half Helmet) ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದವರನ್ನು ತಡೆದು ಹೆಲ್ಮೆಟ್‌ ತೆಗೆಸಿದರು. ಅಲ್ಲದೆ ಐಎಸ್‌ಐ ಮಾರ್ಕ್‌ ಇರುವ ಹೆಲ್ಮೆಟ್‌ಗಳನ್ನು ಧರಸಬೇಕು ಎಂದು ತಿಳಿವಳಿಕೆ ಮೂಡಿಸಿ ಎಚ್ಚರಿಕೆ ನೀಡಿ ಕಳುಹಿಸಿದರು.

Half helmet seized by police

ವಾಹನ ಸವಾರರಿಗ ಪೀಕಲಾಟ

ಪೊಲೀಸರು ವಾಹನ ತಡೆಯುವುದು, ದಂಡದಿಂದ ತಪ್ಪಿಸಿಕೊಳ್ಳಲು ಕಡಿಮೆ ಬೆಲೆಯ, ಐಎಸ್‌ಐ ಗುರುತು ಇಲ್ಲದ ಹೆಲ್ಮೆಟ್‌ ಧರಿಸುತ್ತಿದ್ದರು. ಇವತ್ತು ಇಂತಹ ಹೆಲ್ಮೆಟ್‌ ಧರಿಸಿದ್ದವರನ್ನೆ ಪೊಲೀಸರು ತಡೆದು ಹೆಲ್ಮೆಟ್‌ ತೆಗೆಸಿದರು. ಇದರಿಂದ ಹಾಫ್‌ ಹೆಲ್ಮೆಟ್‌ ಧರಿಸಿದ್ದ ದ್ವಿಚಕ್ರ ವಾಹನ ಸವಾರರು ಪೀಕಲಾಟ ಅನುಭವಿಸಿದರು. ಅನಿವಾರ್ಯವಾಗಿ ಹೆಲ್ಮೆಟ್‌ಗಳನ್ನು ಬಿಚ್ಚಿ ಬಿಸಾಡಿದರು. ಕಾರ್ಯಾಚರಣೆ ವೇಳೆ ಸುಮಾರು 1000 ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮುಂದೆ ಹಾಫ್‌ ಹೆಲ್ಮೆಟ್‌ ಧರಿಸುವವರ ವಿರುದ್ಧ ಮೋಟಾರ್‌ ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

Traffic Police Half helmet seized

ಜಾಗೃತಿ ಮೂಡಿಸದೆ ಕ್ರಮ, ಆಕ್ಷೇಪ

ಪೊಲೀಸರು ದಿಢೀರ್‌ ಕಾರ್ಯಾಚರಣೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ‘ಹಾಫ್‌ ಹೆಲ್ಮೆಟ್‌  (Half Helmet) ಧರಿಸದಂತೆ ಮೊದಲು ಜಾಗೃತಿ ಮೂಡಿಸಬೇಕಿತ್ತು. ಹೀಗೆ ಏಕಾಏಕಿ ಕಾರ್ಯಾಚರಣೆ ನಡೆಸಿ ಜನರ ಹೆಲ್ಮೆಟ್‌ಗಳನ್ನು ಕಸಿದುಕೊಳ್ಳುವುದು ಸರಿಯಲ್ಲʼ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಅವರು ಈಗಾಗಲೆ ಜಾಗೃತಿ ಮೂಡಿಸಲಾಗಿದೆ. ಮತ್ತೊಮ್ಮೆ ಜಾಗೃತಿ ಕಾರ್ಯಕ್ರಮ ಮಾಡಲಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗ ಕಮಿಷನರ್‌ಗೆ ಸ್ಮಾರ್ಟ್‌ ಸಿಟಿ ಕಾಮಗಾರಿಯಿಂದ ಕರೆಂಟ್‌ ಶಾಕ್‌..!

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ, ಡಿವೈಎಸ್‌ಪಿ ಸುರೇಶ್‌ ಮಾರ್ಗದರ್ಶನದಲ್ಲಿ, ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌ ಅವರ ನೇತೃತ್ವದಲ್ಲಿ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆ ಪೊಲೀಸ್‌ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

PARISHRAMA NEET Academy

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article Mayanna-Gowda-Shimoga-Palike-Commissioner ಶಿವಮೊಗ್ಗ ಕಮಿಷನರ್‌ಗೆ ಸ್ಮಾರ್ಟ್‌ ಸಿಟಿ ಕಾಮಗಾರಿಯಿಂದ ಕರೆಂಟ್‌ ಶಾಕ್‌..!
Next Article Youth-jumping-from-Tunga-Bridge-in-Shimoga ಶಿವಮೊಗ್ಗ ತುಂಗಾ ನದಿ ಹೊಸ ಸೇತುವೆ ಮೇಲಿಂದ ಜಿಗಿದು ಯುವಕನ ಹುಚ್ಚಾಟ, ವಿಡಿಯೋ ವೈರಲ್‌

ಇದನ್ನೂ ಓದಿ

hakti-cars-pvt-ltd-shimoga-Toyota-showroom
SHIVAMOGGA CITY

ಶಿವಮೊಗ್ಗದಲ್ಲಿ 2 ದಿನ ಕಾರು ಎಕ್ಸ್‌ಚೇಂಜ್‌ ಮೇಳ, ರೈತರು, ಸರ್ಕಾರಿ ನೌಕರರು, ಕಾರ್ಪೊರೇಟ್‌ ಉದ್ಯೋಗಿಗಳಿಗೆ ಭರ್ಜರಿ ಆಫರ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Tree-cuttion-row-in-Shimoga-city
SHIVAMOGGA CITY

ರಾತ್ರೋರಾತ್ರಿ ಕಾರಿನಲ್ಲಿ ಬಂದು ಫುಟ್‌ಪಾತ್‌ ಮೇಲಿದ್ದ ಮರಕ್ಕೆ ಗರಗಸ ಹಾಕಿದ ದುಷ್ಕರ್ಮಿಗಳು, ಒಬ್ಬ ಅರೆಸ್ಟ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Rain-in-Shimoga-city-today
SHIVAMOGGA CITY

ಶಿವಮೊಗ್ಗ ಸಿಟಿಯಲ್ಲಿ ಗಾಳಿ ಸಹಿತ ಜೋರು ಮಳೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
-Monkey-catches-mobile-phone-at-Nanjappa-Hospital
SHIVAMOGGA CITY

ಶಿವಮೊಗ್ಗದಲ್ಲಿ ಯುವತಿಯ ಮೊಬೈಲ್‌ ಕದ್ದ ಮಂಗ, ಒಂದು ಗಂಟೆ ಮರವೇರಿ ಕುಳಿತು ಪ್ರಹಸನ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Professor-Chandrshekar-felicitated-at-Shimoga
COLLEGE NEWSSHIVAMOGGA CITY

ಕುವೆಂಪು ವಿವಿ ನಿವೃತ್ತ ಪ್ರೊಫೆಸರ್‌ ಚಂದ್ರೇಶೇಖರ್‌ ಅಭಿನಂದನಾ ಸಮಾರಂಭ, ಹೇಗಿತ್ತು? ಯಾರೆಲ್ಲ ಏನೆಲ್ಲ ಮಾತನಾಡಿದರು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
VISL-Contract-Workers-union-meets-Pejavara-seer
BHADRAVATHISHIVAMOGGA CITY

VISL ಕಾರ್ಮಿಕರಿಗೆ ಪೇಜಾವರ ‍ಸ್ವಾಮೀಜಿ ಅಭಯ, ಏನಂದ್ರು ಶ್ರೀಗಳು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Previous Next
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?