ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 29 ಜುಲೈ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಂಚನೆ ಪ್ರಕರಣ ಸಂಬಂಧ ಎಐಎಂಇಪಿ ಪಕ್ಷದ ಸಂಸ್ಥಾಪಕಿ ನೌಹೇರಾ ಶೇಖ್ ಅವರನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೈದರಾಬಾದ್’ನಿಂದ ನೌಹೇರಾ ಶೇಖ್ ಅವರನ್ನು ಬಾಡಿ ವಾರೆಂಟ್ ಮೇಲೆ ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವತ್ತು ಶಿವಮೊಗ್ಗ ಕೋರ್ಟ್’ಗೆ ಹಾಜರುಪಡಿಸಲಾಗಿದ್ದು, ಆರು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.
25 ಲಕ್ಷದ ವಂಚನೆ ಕೇಸ್
ನೌಹೇರಾ ಶೇಖ್, ತಮ್ಮ ಒಡೆತನದ ಹೀರಾ ಗೋಲ್ಡ್ ಕಂಪನಿ ಮೇಲೆ ಶಿವಮೊಗ್ಗದ ಮೊಹಮ್ಮದ್ ಅತೀಕ್ ಎಂಬುವವರು 25 ಲಕ್ಷ ಹಣ ಹೂಡಿಕೆ ಮಾಡಿದ್ದರು. ಮೊಹಮ್ಮದ್ ಅತೀಕ್ ಅವರಿಗೆ ನೌಹೇರಾ ಶೇಖ್ ಅವರು ಬಡ್ಡಿಯನ್ನು ಸರಿಯಾಗಿ ಹಿಂತಿರುಗಿಸದೆ, ಹೂಡಿಕೆ ಮಾಡಿದ್ದ ಹಣವನ್ನು ಮರುಪಾವತಿ ಮಾಡದೆ ವಂಚಿಸಿದ್ದರು ಎಂದು ಆರೋಪಿಸಿ ದೂರು ನೀಡಿದ್ದರು.
ದೇಶದ ವಿವಿಧೆಡೆ ಕಂಪ್ಲೇಂಟ್
ಹೂಡಿಕೆದಾರರಿಗೆ ವಂಚಿಸಿರುವ ಆರೋಪದ ಮೇಲೆ ನೌಹೇರಾ ಶೇಖ್ ವಿರುದ್ಧ ದೇಶದ ವಿವಿಧೆಡೆ ಪ್ರಕರಣ ದಾಖಲಾಗಿದೆ. ಹಾಗಾಗಿ ನೌಹೇರಾ ಶೇಖ್ ಅವರನ್ನು ಬಂಧಿಸಿ ಹೈದರಾಬಾದ್’ನ ಚಂಚಲಗುಡ ಜೈಲಿನಲ್ಲಿಡಲಾಗಿತ್ತು.
ಯಾರು ಗೊತ್ತಾ ನೌಹೇರಾ ಶೇಖ್?
ನೌಹೇರಾ ಶೇಖ್ ಹೈದರಾಬಾದ್ ಮೂಲದ ಉದ್ಯಮಿ. ಚಿನ್ನಾಭರಣ, ಜವಳಿ, ಗ್ರಾನೈಟ್, ಮಿನರಲ್ ವಾಟರ್, ಟ್ರಾವೆಲ್ಸ್, ಈ ಕಾಮರ್ಸ್ ಸೇರಿದಂತೆ ವಿವಿಧ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈಕೆ ಸ್ಥಾಪಿಸಿದ ಹೀರಾ ಗೋಲ್ಡ್ ಹೈದರಾಬಾದ್’ನ ಪ್ರತಿಷ್ಠಿತ ಚಿನ್ನಾಭರಣ ಉದ್ಯಮವಾಗಿದೆ. ಇದೇ ಸಂಸ್ಥೆಯ ಮೇಲೆ ಹಲವರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಲಾಗಿದೆ. 2017ರಲ್ಲಿ ನೌಹೇರಾ ಶೇಖ್ ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ ಸ್ಥಾಪಿಸಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆಗೆ ಎಐಎಂಇಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈಕೆ ಕನ್ನಡದಲ್ಲಿ ಸ್ವರಾಜ್ ಎಕ್ಸ್’ಪ್ರೆಸ್ ಎಂಬ ಸುದ್ದಿವಾಹಿನಿಯನ್ನು ಸ್ಥಾಪಿಸಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]