ಬೆಳಗ್ಗೆ ದೇಗುಲಕ್ಕೆ ಬಂದ ಅರ್ಚಕರಿಗೆ ಕಾದಿತ್ತು ಆಘಾತ, ವಿಷಯ ತಿಳಿದು ಕಮಿಟಿಯವರಿಗೆ ದಿಗ್ಭ್ರಮೆ, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 10 JULY 2024

SHIMOGA : ದೇವಸ್ಥಾನದ (Temple) ಬಾಗಿಲನ್ನು ಮೀಟಿ ತೆಗೆದು ಹುಂಡಿ ಒಡೆದು ಕಾಣಿಕೆ ಹಣ ಕಳವು ಮಾಡಲಾಗಿದೆ. ಶಿವಮೊಗ್ಗ ತಾಲೂಕು ಆಲದಹಳ್ಳಿ ಶ್ರೀ ವೀರಭದ್ರೇಶ್ವರ ಮತ್ತು ಹಾಲಸ್ವಾಮಿ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ.

ಅರ್ಚಕರು ಬೆಳಗ್ಗೆ ಪೂಜೆಗೆಂದು ದೇಗುಲಕ್ಕೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಹುಂಡಿ ಒಡೆದು ಸುಮಾರು 7500 ರೂ. ಕಾಣಿಕ ಹಣ, ದೇವರ ಕೊರಳಿನ 3 ಬೆಳ್ಳಿಯ ಕರಡಿಗೆ, ದೇವರ ಚಿನ್ನದ ತಾಳಿ, ಚಿನ್ನದ ಗುಂಡುಗಳು, 2 ಸಿಸಿ ಕ್ಯಾಮರಾಗಳನ್ನು ಕದೊಯ್ದಿದ್ದಾರೆ.

ಜೂ.18ರಂದು ಘಟನೆ ಸಂಭವಿಸಿದೆ. ದೇವಸ್ಥಾನದ ಕಮಿಟಿಯವರು ಸಭೆ ನಡೆಸಿ ತೀರ್ಮಾನ ತೆಗೆದುಕೊಂಡ ಬಳಿಕ ದೂರು ನೀಡಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಇವತ್ತು ಭಾರಿ ಮಳೆ ಸಾಧ್ಯತೆ, ಎಷ್ಟಿರುತ್ತೆ ಇವತ್ತಿನ ತಾಪಮಾನ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment