ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 30 APRIL 2024
SHIMOGA : ಗಾಂಧಿ ಬಜಾರ್ನ ಕಾಳಿಕ ಪರಮೇಶ್ವರಿ ದೇವಸ್ಥಾನದ ಬೀಗ ಮುರಿದು ದೇವರ ಆಭರಣ, ಹಣ ಕಳ್ಳತನ ಮಾಡಲಾಗಿದೆ. ದೇವಿಯ ಮೂರ್ತಿಯನ್ನು ಹಾನಿಗೊಳಿಸಲಾಗಿದೆ ಎಂದು ಆರೋಪಿಸಿ ದೇವಸ್ಥಾನದ ಅಧ್ಯಕ್ಷ ರಮೇಶ್ ದೂರು ನೀಡಿದ್ದಾರೆ.
ಏ.28ರಂದು ಬೆಳಗ್ಗೆ ದೇವಸ್ಥಾನದ ಮ್ಯಾನೇಜರ್ ಬಂದಾಗ ದೇಗುಲದ ಬಾಗಿಲಿನ ಬೀಗ ಮರಿದಿರುವುದು ಗೊತ್ತಾಗಿದೆ. ಗರ್ಭಗುಡಿಗೆ ಹಾಕಿದ್ದ ಬೀಗಗಳನ್ನು ಮುರಿಯಲಾಗಿತ್ತು. ಒಟ್ಟು 1.97 ಲಕ್ಷ ರೂ. ಮೌಲ್ಯ ಚಿನ್ನ, ಬೆಳ್ಳಿಯ ಆಭರಣ, 52 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಇನ್ನು, ದೇವಿಯ ಮೂರ್ತಿಯ ಮುಖದ ಭಾಗದಲ್ಲಿ ಗೀಚಿ ಹಾನಿಗೊಳಿಸಲಾಗಿದೆ ಎಂದು ಆರೋಪಿಸಿ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಂಕಿ, ಸುಟ್ಟು ಕರಕಲಾಯ್ತು ಅಂಗಡಿ






