ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 23 JULY 2024
SAVALANGA : ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಡಿಕ್ಕಿಯಾಗಿ ಕ್ರೈಸ್ತ ಧರ್ಮಗುರು (Priest) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸವಳಂಗ ಸಮೀಪದ ಚಿನ್ನಿಕಟ್ಟೆ ಬಳಿ ಇಂದು ಮಧ್ಯಾಹ್ನ ಘಟನೆ ಸಂಭವಿಸಿದೆ.
ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತು. ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನ್ಯಾಮತಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ ⇓
ಹೊಸನಗರದಲ್ಲಿ ಕಡಿಮೆಯಾದ ಮಳೆ, ಚಕ್ರಾ, ಸಾವೇಹಕ್ಲುವಿನಿಂದ ಎಷ್ಟಿದೆ ಹೊರ ಹರಿವು?
LATEST NEWS
- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು





