ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 06 ಜುಲೈ 2019
ಮನೆ ಬಾಗಿಲಿಗೆ ಹಾಕಿದ್ದ ಬಿಗವನ್ನು ಚಿಲಕ ಸಹಿತ ಕಿತ್ತು, ಕಳ್ಳತನ ಮಾಡಿರುವ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿದ್ದ 60 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಅಶೋಕನಗರದ ಹೇಮಲತಾ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯವರೆಲ್ಲ ಬೆಂಗಳೂರಿಗೆ ತೆರಳಿದ್ದ ವೇಳೆ, ಘಟನೆ ನಡೆದಿದೆ. ಜುಲೈ 5ರಂದು ಹೇಮಲತಾ ಅವರು ಮನೆಗೆ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬೀಗ ಹಾಕಿದ್ದ ಚಿಲಕವನ್ನೇ ಮುರಿದು ಒಳಗೆ ಹೋಗಿರುವ ಕಳ್ಳರು, ಆಯುಧ ಬಳಸಿ ಬೀರು ಲಾಕರ್ ಮುರಿದಿದ್ದಾರೆ. ಅದರಲ್ಲಿದ್ದ 60,500 ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ ಕಳವು ಮಾಡಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]