ಶಿವಮೊಗ್ಗ ಲೈವ್.ಕಾಂ | SORABA NEWS | 3 ಸೆಪ್ಟೆಂಬರ್ 2021
ಗ್ರಾಮ ಪಂಚಾಯಿತಿ ಕಟ್ಟಡವೊಂದರ ಬೀಗ ಒಡೆದ ಕಳ್ಳರು, ಕಂಪ್ಯೂಟರ್ ಉಪಕರಣಗಳನ್ನು ಕದ್ದೊಯ್ದಿದ್ದಾರೆ. ಸೊರಬ ತಾಲೂಕು ಮುಟಗುಪ್ಪೆ ಗ್ರಾಮ ಪಂಚಾಯಿತಯಲ್ಲಿ ಘಟನೆ ಸಂಭವಿಸಿದೆ.
ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಯಲ್ಲಿದ್ದ ಕಂಪ್ಯೂಟರ್ ಮಾನಿಟರ್, ಕೀ ಬೋರ್ಡ್, ಮೌಸ್, ಕಬೋರ್ಡ್’ನಲ್ಲಿದ್ದ ವೆಬ್ ಕ್ಯಾಮರಾ, ಡಿಜಿ ಕ್ಯಾಮರಾ, ಆಡಳಿತಾಧಿಕಾರಿ ಕೊಠಡಿಯಲ್ಲಿದ್ದ ಕಂಪ್ಯೂಟರ್ ಮಾನಿಟರ್, ಕೀ ಬೋರ್ಡ್, ಮೌಸ್, ಸಿಸಿಟಿವಿಯ ಡಿವಿಆರ್ ಕಳ್ಳತನ ಮಾಡಲಾಗಿದೆ.
ಕಳುವಾದ ವಸ್ತುಗಳ ಅಂದಾಜು ಮೌಲ್ಯ 50 ಸಾವಿರ ರೂ. ಎಂದು ಹೇಳಲಾಗಿದೆ. ಗ್ರಾಮ ಪಂಚಾಯಿತಿ ಪಿಡಿಒ ಅವರು ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200