ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 30 ಡಿಸೆಂಬರ್ 2021
ಮಕ್ಕಳಾಗದಿರುವುದಕ್ಕೆ ಚಿಕಿತ್ಸೆ ನೀಡಿ, ಔಷಧಿ ಕೊಡುತ್ತೇವೆ ಎಂದು ನಂಬಿಸಿ ಮನೆಯಲ್ಲಿದ್ದ ನಗದು, ಮೊಬೈಲ್ ಫೋನ್ ಹೊತ್ತೊಯ್ಯಲಾಗಿದೆ. ಈ ಸಂಬಂಧ ನಯ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಗೆಜ್ಜೇನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೆಂಪಮ್ಮ ಎಂಬುವವರ ಮನೆಗೆ ಬಂದ ಇಬ್ಬರು ವಂಚಕರು ಮೋಸ ಮಾಡಿ, ನಗದು, ಮೊಬೈಲ್ ಎತ್ತಿಕೊಂಡು ಪರಾರಿಯಾಗಿದ್ದಾರೆ.
ಏನಿದು ಪ್ರಕರಣ? ಹೇಗಾಯ್ತು ಘಟನೆ?
ಕೆಂಪಮ್ಮಅವರು ತಮ್ಮ ಮಗಳು, ಅಳಿಯನೊಂದಿಗೆ ವಾಸವಾಗಿದ್ದಾರೆ. ಮಂಗಳವಾರ ಬೆಳಗ್ಗೆ ಕೆಂಪಮ್ಮಅವರ ಮಗಳು ಪೂಜೆಗೆಂದು ದೇವಸ್ಥಾನಕ್ಕೆ ತೆರಳಿದ್ದರು. ಈ ಸಂದರ್ಭ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ತಮ್ಮನ್ನು ವೈದ್ಯರೆಂದು ಪರಿಚಯಿಸಿಕೊಂಡರು. ಮಕ್ಕಳಾಗದಿರುವುದಕ್ಕೆ ಔಷಧಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ.
ಹಣ, ಮೊಬೈಲು, ತುಳಸಿ ಎಲೆ
ಮನೆಯಲ್ಲೇ ಇದ್ದ ಅಳಿಯನನ್ನು ಮಲಗಿಸಿ ಚಿಕಿತ್ಸೆ ಆರಂಭಿಸಿದರು. ಔಷಧಕ್ಕೆ 20 ಸಾವಿರ ರೂ. ಖರ್ಚಾಗಲಿದೆ ಎಂದು ತಿಳಿಸಿದರು. ಅಷ್ಟು ಹಣವಿಲ್ಲ ಎಂದು ತಿಳಿಸಿದರೂ ಪಟ್ಟು ಬಿಡದ ಇಬ್ಬರು ಅಪರಿಚಿತರು, ಮನೆಯಲ್ಲಿದ್ದ ಏಳು ಸಾವಿರ ರೂ. ಹಣ ಪಡೆದಿದ್ದಾರೆ. ಚಿಕಿತ್ಸೆಗೆ ತುಳಸಿ ಬೇಕಿದೆ ಎಂದು ತಿಳಿಸಿ ಕೆಂಪಮ್ಮಅವರನ್ನು ಮನೆಯಿಂದ ಹೊರಗೆ ಕಳುಹಿಸಿ, ಅಳಿಯನ ಮೊಬೈಲ್ ಪಡೆದುಕೊಂಡಿದ್ದಾರೆ.
ಚಿಕಿತ್ಸೆ ನಡುವೆಯೇ ದಿಢೀರ್ ಹೊರಗೆ ಹೋದ ಇಬ್ಬರು ಅಪರಿಚಿತರು, ಬೈಕಿನಲ್ಲಿ ಪರಾರಿಯಾಗಿದ್ದಾರೆ.
ಏಳು ಸಾವಿರ ನಗದು, 16 ಸಾವಿರ ರೂ. ಮೊಬೈಲ್ ಎತ್ತಿಕೊಂಡು ಪರಾರಿಯಾದ ಇಬ್ಬರು ಅಪರಿಚಿತರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಕೆಂಪಮ್ಮ ಅವರು ದೂರು ನೀಡಿದ್ದಾರೆ. ವಿನೋಬನಗರ ಪೊಲೀಸರು ಪ್ರಕರಣ ದಾಖಲು ಮಾಡಕೊಂಡು ತನಿಖೆ ಕೈಗೊಂಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422