ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 5 ಜನವರಿ 2020
ಹೊಸ ವರ್ಷ ಶುರುವಾಗಿ ಎರಡೇ ಗಂಟೆಯಲ್ಲಿ ಶಿವಮೊಗ್ಗದ ಎಟಿಎನ್’ಸಿ ಕಾಲೇಜು ಮುಂಬಾಗ ದುಷ್ಕರ್ಮಿಗಳು, ಯುವಕನೊಬ್ಬನನ್ನು ಹಿಡಿದು ಥಳಿಸಿ, ಮೊಬೈಲ್, ದುಡ್ಡು, ಎಟಿಎಂ ಸಾಫ್ಟ್’ವೇರ್ ಟೂಲ್ಸ್ ಕದ್ದೊಯ್ದಿದ್ದಾರೆ.
ಜನವರಿ ಒಂದರಂದು ರಾತ್ರಿ 2 ಗಂಟೆ ಹೊತ್ತಿಗೆ ಘಟನೆ ನಡೆದಿದೆ. ಕಿರಣ್ ಕುಮಾರ್ ಎಂಬುವವರು ನಡೆದುಕೊಂಡು ಬರುವಾಗ ಮೂವರು ದುಷ್ಕರ್ಮಿಗಳು ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ.]
ಘಟನೆ ವಿವರ
ತುಮಕೂರಿಗೆ ತೆರಳಿದ್ದ ಕಿರಣ್ ಕುಮಾರ್, ಕರ್ನಾಟಕ ಸಂಘದ ಬಳಿ ಬಸ್ ಇಳಿದಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ತೆಗೆದುಕೊಂಡು ಮನೆಗೆ ತೆರಳುವ ಯೋಚನೆಯೊಂದಿಗೆ, ನಡೆದುಕೊಂಡು ಹೋಗುತ್ತಿದ್ದರು. ಎಟಿಎನ್’ಸಿ ಕಾಲೇಜು ಮುಂಭಾಗ ನಡೆದು ಹೋಗುವಾಗ ಮೂವರು ದುಷ್ಕರ್ಮಿಗಳು ಕಿರಣ್ ಕುಮಾರ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಜೇಬಿನಲ್ಲಿದ್ದ ಹಣ, ಎರಡು ಮೊಬೈಲ್, ಎಟಿಎಂ ಸಾಫ್ಟ್’ವೇರ್ ಟೂಲ್ಸ್ ಕದ್ದೊಯ್ದಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422