SHIVAMOGGA LIVE NEWS | 11 ಮಾರ್ಚ್ 2022
ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಅದೇ ಗ್ರಾಮದ ಯುವಕನನ್ನು ಬಂಧಿಸಲಾಗಿದೆ. ಹಣ, ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ತಾಲೂಕು ರಬ್ಬರ್ ಕಾಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಜನವರಿ 13ರಂದು ರಬ್ಬರ್ ಕಾಡು ಗ್ರಾಮದ ನಿವಾಸಿಯೊಬ್ಬರು ತಮ್ಮ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಮನೆಗೆ ಬಂದಾಗ ಬಾಗಿಲು ಬೀಗ ಮುರಿದಿರುವುದು ಗೊತ್ತಾಗಿದೆ.
ಲಕ್ಷ ಲಕ್ಷ ನಾಪತ್ತೆಯಾಗಿತ್ತು
ಮನೆಯ ಅಲ್ಮೆರಾದಲ್ಲಿದ್ದ 6 ಲಕ್ಷ ರೂ. ನಗದು, 5.66 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಅದೇ ಊರಲ್ಲಿದ್ದ ಕಳ್ಳ
ಘಟನೆ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ರಬ್ಬರ್ ಕಾಡು ಗ್ರಾಮದ ಚೇತನ್ (27) ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ 5.60 ಲಕ್ಷ ರೂ. ಹಣ, 6.43 ಲಕ್ಷ ಮೌಲ್ಯದ 134.44 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200