SHIVAMOGGA LIVE NEWS | 21 MARCH 2024
HOLEHONNURU : ಅರದೊಟ್ಲು ಗ್ರಾಮದ ಬಳಿ ಸೋಮವಾರ ವ್ಯಕ್ತಿಯೋರ್ವನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ 22 ಸಾವಿರ ರೂ. ಅಪಹರಿಸಲಾಗಿದೆ.
ಕೊಲೆ ಬೆದರಿಕೆ ಹಾಕಿ 22 ದರೋಡೆ
ಅರದೊಟ್ಲು ಗ್ರಾಮದ ದೊರೆ ಎಂಬುವರು ಭದ್ರಾವತಿಯಿಂದ ಕೆಲಸ ಮುಗಿಸಿ ಸಂಜೆ ಮನೆಗೆ ಮರಳುವಾಗ ಪಲ್ಸರ್ ಬೈಕ್‌ನಲ್ಲಿ ಬಂದ ಮೂವರು ಯುವಕರು ಅಡ್ಡಗಟ್ಟಿದ್ದಾರೆ. ತಕ್ಷಣ ಒಬ್ಬ ಯುವಕ ಚಾಕು ತೋರಿಸಿ ಹಣ ಹಾಗೂ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ತಪ್ಪಿಸಿಕೊಳ್ಳಲು ಹೋದ ಸಂದರ್ಭ ದೊರೆ ಅವರಿಗೆ ಚಾಕುವಿನಿಂದ ಇರಿದು, ಕೊಲೆ ಬೆದರಿಕೆ ಹಾಕಿ ಅವರ ಬಳಿ ಇದ್ದ 22 ಸಾವಿರ ರೂ. ಕಸಿದುಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ – ಹರಿಗೆ ಬಳಿ ತಲೆಗೆ ಮಚ್ಚಿನಿಂದ ಹಲ್ಲೆ ಕೇಸ್, ಆರು ಮಂದಿ ಅರೆಸ್ಟ್
ಶಿಕ್ಷಕನ ಮೇಲೆ ಚಾಕು ದಾಳಿ
ಇದಕ್ಕೂ ಮುನ್ನ ಸಿದ್ಲಿಪುರ – ಸನ್ಯಾಸಿಕೋಡಮಗ್ಗೆ ನಡುವೆ ಭೂಪಾಳಂ ಫ್ಯಾಕ್ಟರಿ ಏರಿಯಾದಲ್ಲಿ ಅರಬಿಳಚಿ ಗ್ರಾಮದ ಶಾಲೆ ಶಿಕ್ಷಕರೊಬ್ಬರು ಶಾಲೆ ಮುಗಿಸಿಕೊಂಡು ಬನ್ನಿಕೆರೆ ಗ್ರಾಮಕ್ಕೆ ಹೋಗುತ್ತಿದ್ದರು. ಮನೆಯಿಂದ ಮೊಬೈಲ್‌ಗೆ ಕರೆ ಬಂದಿತೆಂದು ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಮಾತನಾಡುವಾಗ ಇದೇ ಮೂವರು ಯುವಕರು ಬೈಕ್ ನಿಲ್ಲಿಸಿ ಹೊಳಲೂರಿಗೆ ಹೋಗುವ ದಾರಿ ಕೇಳಿದ್ದಾರೆ. ಅಷ್ಟರಲ್ಲಿ ಒಬ್ಬ ಯುವಕ ಬೈಕಿನಿಂದ ಇಳಿದು ಚಾಕು ತೋರಿಸಿ ಹಣ ಕೇಳಿದ್ದಾನೆ. ಶಿಕ್ಷಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಇನ್ನೋರ್ವ ಯುವಕ ತನ್ನಲ್ಲಿದ್ದ ಚಾಕು ಎಸೆದಿದ್ದಾನೆ. ಇದರಿಂದ ಶಿಕ್ಷಕನ ಕಿವಿ ಭಾಗದಲ್ಲಿ ಗಾಯ ಆಗಿದ್ದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.
ಇದನ್ನೂ ಓದಿ – ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಸೂಚನೆ, ಕೆಲವರಿಗೆ ಆದೇಶದಿಂದ ವಿನಾಯಿತಿ