ಶಿವಮೊಗ್ಗದಲ್ಲಿ ರೋಡ್ ಸೈಡಲ್ಲಿ ನಿಂತಿದ್ದ ಯುವಕರಿಗೆ ಚಾಕು ತೋರಿಸಿ ಕೊಲೆ ಬೆದರಿಕೆ

ಶಿವಮೊಗ್ಗ
LIVE

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 22 FEBRUARY 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕ್ಯಾಂಟೀನ್‍ನಲ್ಲಿ ಟೀ ಕುಡಿದು, ರೋಡ್‍ ಸೈಡಲ್ಲಿ ನಿಂತಿದ್ದ ಯುವಕರಿಗೆ ಚಾಕು ತೋರಿಸಿ ಕೊಲೆ ಬೆದರಿಕೆ ಒಡ್ಡಲಾಗಿದೆ. ಗಾಬರಿಯಿಂದ ಯುವಕರು ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ | ಕದ್ದ ಮೊಬೈಲ್‌ಗಳನ್ನು ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಬಳಿ ಮಾರುತ್ತಿದ್ದವನು ಅರೆಸ್ಟ್, ಎಷ್ಟು ಮೊಬೈಲ್ ಸಿಕ್ಕಿವೆ?

ಅಣ್ಣಾನಗರ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಗಾರೆ ಕೆಲಸ ಮಾಡುವ ನವೀನ್ ರಾಜ್ ಎಂಬುವವರು ತಮ್ಮ ಸ್ನೇಹಿತರಾದ ಪ್ರಭು, ಹರೀಶ ಮತ್ತು ಸಂತೋಷ ಎಂಬುವವರ ಜೊತೆಗೆ ಸಂಜೆ ಟೀ ಕುಡಿದು, ಮಾತನಾಡುತ್ತ ನಿಂತಿದ್ದಾಗ, ಬೆದರಿಕೆ ಒಡ್ಡಲಾಗಿದೆ.

ಇದನ್ನೂ ಓದಿ | ಕೌನ್ ಬನೇಗಾ ಕರೋಡ್‌ಪತಿ ಹೆಸರಲ್ಲಿ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಿಗೆ 1.43 ಲಕ್ಷ ರೂ. ವಂಚನೆ, ವಂಚಿಸಿದ್ದು ಹೇಗೆ?

ದಿಢೀರನೆ ಬಂದ ಇಬ್ಬರು ಯುವಕರು ಚಾಕು ತೋರಿಸಿ, ಬೆದರಿಕೆ ಒಡ್ಡಿದ್ದಾರೆ. ಹಲ್ಲೆಗೂ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆ ನಡೆಸಲು ಮುಂದಾದವರನ್ನು ಚಪ್ಪಡಿ ಮತ್ತು ಶಫಾನ್ ಎಂದು ಗುರುತಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment