SHIVAMOGGA LIVE NEWS | 5 APRIL 2024
SHIMOGA : ಮೇಯಲು ಬಿಟ್ಟಿದ್ದ ಮೂರು ಹಸುಗಳು ನಾಪತ್ತೆಯಾಗಿವೆ. ಶಿವಮೊಗ್ಗದ ಅನಪಿನಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಇಲ್ಲಿನ ರತ್ನಮ್ಮ ಎಂಬುವವರು ಸಾಕಿದ್ದ ಎಂಟು ಹಸುಗಳ ಪೈಕಿ ಮೂರು ಹಸುಗಳು ಕಳ್ಳತನವಾಗಿವೆ.
ಮಾ.16ರಂದು ಮೇಯಲು ಬಿಟ್ಟಿದ್ದ ಹಸುಗಳ ಪೈಕಿ ಎರಡು ಹಸುಗಳು ಮರಳಿ ಕೊಟ್ಟಿಗೆಗೆ ಬಂದಿಲ್ಲ. ಮಾ.26ರಂದು ಮತ್ತೊಂದು ಹಸು ನಾಪ್ತೆಯಾಗಿದೆ. ಇವುಗಳ ಮೌಲ್ಯ 55 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಮೇಯಲು ಬಿಟ್ಟಿದ್ದ ಹಸುಗಳ ಕಳ್ಳತನವಾಗಿದೆ ಎಂದು ಆರೋಪಿಸಿ ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಹಣಗೆರೆ ಕಟ್ಟೆಯ ಲಾಡ್ಜ್ನ ರೂಂನಲ್ಲಿ ಮಹಿಳೆಯ ಮೃತದೇಹ ಪತ್ತೆ, ಆಕೆಯ ಜೊತೆ ಬಂದಿದ್ದ ಪುರುಷ ನಾಪತ್ತೆ