ಸಂಜೆ ಇದ್ದದ್ದು ಬೆಳಗ್ಗೆ ಮಾಯ! ಪುರದಾಳ್ ಡ್ಯಾಂ ಬಳಿ ಆಗಿದ್ದೇನು? ದಾಖಲಾಯ್ತು ಕೇಸ್‌

Published On : ಮಾರ್ಚ್ 31, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಜಿಲ್ಲೆಯ ಪುರದಾಳ್ ಡ್ಯಾಂ (Puradal Dam) ಹಿನ್ನೀರು ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಹುಲಿಗಣತಿ ಕಾರ್ಯಾಚರಣೆಗಾಗಿ ಅಳವಡಿಸಲಾಗಿದ್ದ ಅತ್ಯಾಧುನಿಕ ಕಡಿಬ್ಯಾಕ್ ಕ್ಯಾಮರಾ ಕಳ್ಳತನವಾಗಿದೆ.

ಇದನ್ನೂ ಓದಿ – ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

ಮಾರ್ಚ್ 25ರ ಸಂಜೆ ಗಸ್ತುವನಪಾಲಕರು ಪರಿಶೀಲಿಸಿದಾಗ ಕ್ಯಾಮರಾ ಸ್ಥಳದಲ್ಲಿತ್ತು. ಆದರೆ, ಮಾರ್ಚ್ 26ರ ಬೆಳಗ್ಗೆ ಅರಣ್ಯ ಸಿಬ್ಬಂದಿ ಪರಿಶೀಲನೆಗೆ ಹೋದಾಗ ಕ್ಯಾಮರಾ ಇರಲಿಲ್ಲ. ಅಂದಾಜು ₹25,000 ಮೌಲ್ಯದ ಕ್ಯಾಮರಾ ಕಳವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆ ಸಂಬಂಧ ಶೆಟ್ಟಿಹಳ್ಳಿ ಉಪವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಂ.ಆರ್. ಈ ಕುರಿತು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 31, 2026

Leave a Comment