ಸೂಡೂರು ಬಳಿ ಅದಿರು ಸಾಗಿಸುತ್ತಿದ್ದ 16 ಚಕ್ರದ ಲಾರಿ ಪಲ್ಟಿ, ಹೇಗಾಯ್ತು ಘಟನೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 26 AUGUST 2023

RIPPONPETE : ಚಾಲಕನ ನಿಯಂತ್ರಣ ತಪ್ಪಿದ 16 ಚಕ್ರದ ಲಾರಿ (Truck) ಪಲ್ಟಿಯಾಗಿದೆ. ಚಾಲಕ ಮತ್ತು ನಿರ್ವಾಹಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಿಪ್ಪನ್‌ಪೇಟೆ ಸಮೀಪದ ಸೂಡುರು (Suduru) ಬಳಿ ರಾಜ್ಯ ಹೆದ್ದಾರಿಯಲ್ಲಿ (State Highway) ಘಟನೆ ಸಂಭವಿಸಿದೆ. ಅದಿರು (Ore) ತುಂಬಿಕೊಂಡು ಹೊಸನಗರದ ಕಡೆಯಿಂದ ಶಿವಮೊಗ್ಗದ ಕಡೆಗೆ ಲಾರಿ ತೆರಳುತ್ತಿತ್ತು. ಎದುರಿನಿಂದ ಬಂದ ಕಾರಿಗೆ ದಾರಿ ಬಿಡುವಾಗ ಲಾರಿಯು ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ.

ಇದನ್ನೂ ಓದಿ – ಬಸ್‌-ಬೈಕ್‌ ಡಿಕ್ಕಿ, ಯುವಕ ಸ್ಥಳದಲ್ಲೆ ಸಾವು, ಹುಟ್ಟುಹಬ್ಬದ ಮರುದಿನವೆ ವಿಧಿಯ ಕರಾಳ ಆಟ

ಚಾಲಕ ಮುಸ್ತಫಾ ಮತ್ತು ನಿರ್ವಾಹಕ ರಿಜ್ವಾನ್‌ ಎಂಬುವವರಿಗೆ ಗಾಯವಾಗಿದೆ. ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಿಪ್ಪನ್‌ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

NANDISH-CHICKEN-OFFER

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment