ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 28 ಫೆಬ್ರವರಿ 2022
ಕೃಷ್ಣ ಮೃಗದ ಚರ್ಮಗಳನ್ನು ಮಾರಾಟ ಮಾಡಲು ಬಂದಿದ್ದವರ ಮೇಲೆ ಅರಣ್ಯ ಸಂಚಾರಿ ದಳ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ಕೃಷ್ಣ ಮೃಗಗಳ ಎರಡು ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿಕಾರಿಪುರ ತಾಲೂಕು ಚಿಕ್ಕಮರಡಿ ತಾಂಡಾದ ಡಿಕ್ಯಾನಾಯ್ಕ (35) ಬಂಧಿತ. ಆನಂದಪುರ ಸಮೀಪದ ದಾಸಕೊಪ್ಪ ಬಸ್ ನಿಲ್ದಾಣದ ಬಳಿ ದಾಳಿ ನಡೆಸಲಾಗಿದೆ.
ಹೇಗಾಯ್ತು ಘಟನೆ?
ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಾಳ ಪೊಲೀಸರು ದಾಸಕೊಪ್ಪ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿದ್ದಾರೆ. ಎರಡು ಚೀಲಗಳನ್ನು ಹಿಡಿದು ನಿಂತುಕೊಂಡಿದ್ದ ಇಬ್ಬರು, ಪೊಲೀಸರನ್ನು ಕಂಡ ಕೂಡಲೆ ಪರಾರಿಯಾಗಲು ಯತ್ನಿಸಿದ್ದಾರೆ.
ಬೆನ್ನಟ್ಟಿದ ಪೊಲೀಸರು ಡಿಕ್ಯಾನಾಯ್ಕನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಚೀಲಗಳನ್ನು ಪರಿಶೀಲನೆ ನಡೆಸಿದಾಗ ಕೃಷ್ಣಮೃಗದ ಎರಡು ಚರ್ಮಗಳನ್ನು ಸಿಕ್ಕಿವೆ. ಡಿಕ್ಯಾನಾಯ್ಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೊಬ್ಬನಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.
ಜಿ.ಮಲ್ಲಿಕಾರ್ಜುನ್, ಗಣೇಶ್, ಗಿರೀಶ್, ವಿಶ್ವನಾಥ್, ಕೃಷ್ಣ, ದಿನೇಶ್, ಚೈತ್ರಾ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ| ಬೈಕ್ ಸೀಟ್ ಕೆಳಗೆ ಬುಸುಗುಡುತ್ತಿತ್ತು ನಾಗರಹಾವು
LATEST NEWS
- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

- ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್‌ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





