SHIVAMOGGA LIVE NEWS | 14 MARCH 2024
SAGARA : ಆನಂದಪುರ ಸಮೀಪದ ಗೌರಿಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಆನಂದಪುರದಿಂದ ಆಡೂರಿಗೆ ಹೋಗುತ್ತಿದ್ದ ಬೈಕ್ ಹಾಗೂ ಯಡೇಹಳ್ಳಿಯಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ.
ಸತ್ಯನಾರಾಯಣ ಎಂಬುವವರಿಗೆ ತೀವ್ರ ಗಾಯವಾಗಿದೆ. ಆನಂದಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನೂ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಲಾಗಿದೆ. ಆನಂದಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ – ಆಗುಂಬೆಯಲ್ಲಿ ಟೀ ಕುಡಿದು ಬಸ್ ಹತ್ತಿದ ಪ್ರಯಾಣಿಕನಿಗೆ ಕಾದಿತ್ತು ಆಘಾತ, ವಿಷಯ ತಿಳಿದು ಶಿವಮೊಗ್ಗದ ವ್ಯಕ್ತಿ ಸ್ಥಳಕ್ಕೆ ದೌಡು