ವೇಗವಾಗಿ ಬಂದು ದಿಢೀರ್‌ ಬ್ರೇಕ್‌ ಹಾಕಿ, ತಿರುಗಿ ನಿಂತ ಕಾರು, ಬೈಕ್‌ಗೆ ಡಿಕ್ಕಿಯಾಗಿ ಸವಾರರಿಗೆ ಗಾಯ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 11 NOVEMBER 2023

HOSANAGARA : ಕಾರು (car) ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರು ಗಾಯಗೊಂಡಿದ್ದಾರೆ. ಚಾಲಕ ಅತಿ ವೇಗವಾಗಿ ಕಾರು ಚಲಾಯಿಸಿ ದಿಢೀರ್‌ ಬ್ರೇಕ್‌ ಹಾಕಿದ್ದು, ಕಾರು ತಿರುಗಿ ನಿಂತಿದೆ. ಈ ಸಂದರ್ಭ ಕಾರಿನ ಹಿಂಬದಿಯ ಭಾಗ ಬೈಕ್‌ಗೆ ಡಿಕ್ಕಿಯಾಗಿದೆ.

ಹೊಸನಗರದ ಸಾಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬೈಕ್‌ ಸವಾರರಾದ ಮಳವಳ್ಳಿ ಮತ್ತಿಕೊಪ್ಪದ ‍ಶ್ರೀಕಾಂತ್‌ ಮತ್ತು ತಿಮ್ಮಪ್ಪ ಎಂಬುವವರು ಗಾಯಗೊಂಡಿದ್ದಾರೆ. ‍ಬೈಕ್‌ ಸವರಾರರು ಹೊಸನಗರ ಪಟ್ಟಣದಿಂದ ಮನೆಗೆ ಮರಳುತ್ತಿದ್ದರು. ಬಟ್ಟೆಮಲ್ಲಪ್ಪ ಕಡೆಯಿಂದ ರಸ್ತೆಯ ಬಲ ಭಾಗದಲ್ಲಿ ಬಂದ ಸ್ವಿಫ್ಟ್‌ ಕಾರು (car) ದಿಢೀರ್‌ ಬ್ರೇಕ್‌ ಹಾಕಿದೆ. ಈ ಸಂದರ್ಭ ಕಾರು ತಿರುಗಿ ನಿಂತಿದೆ. ಕಾರಿನ ಹಿಂಭಾಗ ಬೈಕ್‌ಗೆ ತಗುಲಿದೆ.

ಗಾಯಾಳುಗಳು ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment