ಮಾಚೇನಹಳ್ಳಿಗೆ ಡ್ರಾಪ್‌ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ, ಭದ್ರಾವತಿಯ ಇಬ್ಬರು ಅರೆಸ್ಟ್‌

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 6 SEPTEMBER 2023

BHADRAVATHI : ಡ್ರಾಪ್‌ ಕೊಡುವ ನೆಪದಲ್ಲಿ ವ್ಯಕ್ತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಗದು, ಎಟಿಎಂ ಕಾರ್ಡ್‌, ಮೊಬೈಲ್ ಕಸಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು (Police) ಬಂಧಿಸಿದ್ದಾರೆ.

ಭದ್ರಾವತಿ ಸುಲ್ತಾನ್‌ ಮಟ್ಟಿಯ ಎಸ್‌.ಚೇತನ್‌ (21) ಮತ್ತು ಕೆ.ಕೀರ್ತನ್‌ (21) ಬಂಧಿತರು. ಆರೋಪಿಗಳಿಂದ 11,300 ರೂ. ನಗದು, 50 ಸಾವಿರ ರೂ. ಮೌಲ್ಯದ ಎರಡು ಮೊಬೈಲ್‌ ಫೋನ್‌, ಒಂದು ಬೈಕ್‌ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ – ಕುಂಸಿ ಬಳಿಯಿಂದ ಕುಮಟಾಗೆ ತೆರಳಿ ಬಾಕ್ಸ್‌ ತೆಗೆದ ಶಿಕ್ಷಕಿ, ನರ್ಸ್‌ಗೆ ಕಾದಿತ್ತು ಬಿಗ್‌ ಶಾಕ್‌, ಮಹಾ ವಂಚನೆ ವಿರುದ್ಧ ಕೇಸ್‌

ಏನಿದು ಪ್ರಕರಣ?

ಸೆ.1ರಂದು ಸಂಜೆ ಮಾಚೇನಹಳ್ಳಿಗೆ ತೆರಳಲು ಭದ್ರಾವತಿ ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ಉತ್ತರ ಪ್ರದೇಶದ ರವೀಂದ್ರ ಯಾದವ್‌ನನ್ನು ಆರೋಪಿಗಳು ಡ್ರಾಪ್‌ ಕೊಡುವುದಾಗಿ ಬೈಕಿನಲ್ಲಿ ಕರೆತಂದಿದ್ದರು. ಜೇಡಿಕಟ್ಟೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿದ್ದರು. ಘಟನೆ ಸಂಬಂಧ ಭದ್ರಾವತಿ ನ್ಯೂ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್‌ಪಿ ಕೆ.ಆರ್‌.ನಾಗರಾಜ್‌, ಸಿಪಿಐ ಜೆ.ಶ್ರೀಶೈಲಕುಮಾರ್‌ ಮೇಲ್ವಿಚಾರಣೆಯಲ್ಲಿ ನ್ಯೂ ಟೌನ್‌ ಠಾಣೆಯ ಪಿಎಸ್‌ಐಗಳಾದ ಟಿ.ರಮೇಶ್‌ ಮತ್ತು ಭಾರತಿ, ಸಿಬ್ಬಂದಿ ಟಿ.ನವೀನ್‌ ಮತ್ತು ಪ್ರವೀಣ್‌ ಕುಮಾರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment